Advertisement

ಕ್ವಾರಂಟೈನ್‌ ಅವಧಿಯಲ್ಲೇ ಟೀಮ್‌ ಇಂಡಿಯಾ ಅಭ್ಯಾಸ! ಎಲ್ಲರ ಫ‌ಲಿತಾಂಶವೂ ನೆಗೆಟಿವ್‌

12:14 AM Nov 15, 2020 | sudhir |

ಸಿಡ್ನಿ: ಸುದೀರ್ಘ‌ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಎರಡು ದಿನಗಳ ಹಿಂದಷ್ಟೇ ಸಿಡ್ನಿಗೆ ಬಂದಿಳಿದ ಭಾರತ ಕ್ರಿಕೆಟ್‌ ತಂಡದ ಸದಸ್ಯರು ಕ್ವಾರಂಟೈನ್‌ ಅವಧಿಯಲ್ಲೇ ಅಭ್ಯಾಸ ಆರಂಭಿಸಿದ್ದಾರೆ. ಎಲ್ಲರ ಕೋವಿಡ್‌-19 ಫ‌ಲಿತಾಂಶ ನೆಗೆಟಿವ್‌ ಬಂದ ಬಳಿಕ ಶನಿವಾರ ಇವರ ಅಭ್ಯಾಸಕ್ಕೆ ಅನುಮತಿ ನೀಡಲಾಯಿತು.

Advertisement

ಆಟಗಾರರೆಲ್ಲ ಜೈವಿಕ ಸುರಕ್ಷಾ ವಲಯದಲ್ಲಿದ್ದರೂ ಹೊರಾಂಗಣ ಅಭ್ಯಾಸಕ್ಕೆ ಇಳಿದರು. ಇಲ್ಲಿ ಒಂದಿಷ್ಟು ಸುತ್ತು ಓಟ ಹಾಗೂ ಕಸರತ್ತು ನಡೆಸಿದ ಬಳಿಕ ಜಿಮ್‌ನಲ್ಲಿ ಮೈ ಹುರಿಗೊಳಿಸಿಕೊಂಡರು. ಈ ಅಭ್ಯಾಸದ ಕೆಲವು ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ.

ಹನುಮ ವಿಹಾರಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ಅವರೆಲ್ಲ ಸಿಡ್ನಿ ಒಲಿಂಪಿಕ್‌
ಪಾರ್ಕ್‌ನ “ಬ್ಲ್ಯಾಕ್‌ಟೌನ್‌ ಇಂಟರ್‌ನ್ಯಾಶನಲ್‌ ನ್ಪೋರ್ಟ್ಸ್ ಪಾರ್ಕ್‌’ನಲ್ಲಿ ಅಭ್ಯಾಸ ನಡೆಸಿದರು.

ಉಳಿದಂತೆ ಕುಲದೀಪ್‌ ಯಾದವ್‌, ಉಮೇಶ್‌ ಯಾದವ್‌, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌ ಮತ್ತು ಚೇತೇಶ್ವರ್‌ ಪೂಜಾರ, ಟಿ. ನಟರಾಜನ್‌ ಅವರೆಲ್ಲ ಜಿಮ್‌ನಲ್ಲಿ ಹೆಚ್ಚಿನ ವೇಳೆ ಕಳೆದರು.

ಅಭ್ಯಾಸ’ಕ್ಕೆ ಕೊಹ್ಲಿ, ಬುಮ್ರಾ ಇಲ್ಲ
ಟೆಸ್ಟ್‌ ಸರಣಿಗೂ ಮುನ್ನ ಭಾರತ 2 ತ್ರಿದಿನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಎರಡೂ ಸಿಡ್ನಿಯಲ್ಲೇ ನಡೆಯಲಿವೆ. ಮೊದಲ ಪಂದ್ಯ ಡಿ. 6ರಿಂದ 8ರ ತನಕ ಸಾಗಲಿದೆ. ಇದೇ ವೇಳೆ ಟಿ20 ಸರಣಿ ಕೂಡ ನಡೆಯಲಿದೆ (ಡಿ. 4-8). ಹೀಗಾಗಿ ಟೆಸ್ಟ್‌ ಕ್ರಿಕೆಟಿಗರಿಗಾಗಿ ಆಯೋಜಿಸಲಾದ ಈ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಅವರಿಗೆ ಆಡಲು ಸಾಧ್ಯವಾಗದು. ಆದರೆ ಆಸ್ಟ್ರೇಲಿಯ “ಎ’ಗೆ ಪೂಜಾರ ದೊಡ್ಡ ಸವಾಲಾಗುವ ಸಾಧ್ಯತೆ ಇದ್ದೇ ಇದೆ. 2018-19ರ ಸರಣಿ ವೇಳೆ ಅವರು 521 ರನ್‌ ಪೇರಿಸಿ ಕಾಂಗರೂಗಳನ್ನು ಕಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next