Advertisement

20 ವರ್ಷಗಳಿಂದ ನಮ್ಮ ಇಲಾಖೆ ಖಾಲಿ ಇದೆ : ಕಾಂಗ್ರೆಸ್ ಪ್ರಶ್ನೆಗೆ ಸಚಿವ ಚೌವ್ಹಾಣ್‌ ಉತ್ತರ

08:04 PM Sep 15, 2021 | Team Udayavani |

ಬೆಂಗಳೂರು : “ಹೌದು ನಾನೇ ಹೇಳುತ್ತಿದ್ದೇನೆ, ನಮ್ಮ ಇಲಾಖೆ ಖಾಲಿ ಇದೆ. 20 ವರ್ಷಗಳಿಂದ ಹುದ್ದೆಗಳು ಖಾಲಿ ಇವೆ’ ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌವ್ಹಾಣ್‌ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್‌. ರವಿ, ವಿಜಯ್‌ ಸಿಂಗ್‌ ಹಾಗೂ ಬಿಜೆಪಿಯ ಎಸ್‌.ವಿ. ಸಂಕನೂರ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಇಲಾಖೆಯ ವಿವಿಧ 600 ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಕಡತ ಆರ್ಥಿಕ ಇಲಾಖೆಯಲ್ಲಿದೆ. ಅಲ್ಲಿಂದ ಅನುಮೋದನೆ ಸಿಕ್ಕಿದ ಕೂಡಲೇ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.

ನಮ್ಮಲ್ಲಿಂದ ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ಹೋಗಿದ್ದವರನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ. ಹುದ್ದೆ ಭರ್ತಿಯಾಗುವ ತನಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಇದನ್ನೂ ಓದಿ : ವರ್ಷಾಂತ್ಯಕ್ಕೆ ಗಗನಯಾನ : ಕೋವಿಡ್ ನಿಂದ ಯೋಜನೆ ಅನುಷ್ಠಾನ ವಿಳಂಬ : ಸಚಿವ ಜಿತೇಂದ್ರ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next