Advertisement

ಶೀಘ್ರದಲ್ಲಿ ಪ್ರತಿ ಜಿಲ್ಲೆಗೂ ಪಶು ಸಂಪತ್ತು ರಕ್ಷಣೆಗೆ ಆ್ಯಂಬುಲೆನ್ಸ್ : ಪ್ರಭು ಬಿ.ಚವ್ಹಾಣ್

07:45 PM Jul 07, 2020 | sudhir |

ಚಿಕ್ಕಬಳ್ಳಾಪುರ: ಜನರ ಆರೋಗ್ಯ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್ ಮಾದರಿಯಲ್ಲಿಯೆ ರಾಜ್ಯದಲ್ಲಿ ಪಶುಗಳ ಆರೋಗ್ಯದ ರಕ್ಷಣೆಗೆ ಅತ್ಯಾಧನಿಕ ಸೌಲಭ್ಯವುಳ್ಳ ಆ್ಯಂಬುಲೆನ್ಸನ್ನು ಪ್ರತಿ ಜಿಲ್ಲೆಗೊಂದರಂತೆ ಶೀಘ್ರವೇ ಒದಗಿಸಲಾಗುವುದು ಎಂದು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.

Advertisement

ನಗರದ ಹೊರ ವಲಯದ ನಂದಿ ಕ್ರಾಸ್‌ನಲ್ಲಿರುವ ಮೇಗಾ ಡೇರಿಗೆ ಮಂಗಳವಾರ ಆಗಮಿಸಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ  ಮಾತನಾಡಿದ ಅವರು, ಕೋವಿಡ್-19 ಸಲುವಾಗಿ ಪಶು ಆ್ಯಂಬುಲೆನ್ಸ್ ಸೇವೆ ಆರಂಭಕ್ಕೆ ಆಡಚರಣೆ ಉಂಟಾಗಿದ್ದು ಸದ್ಯದಲೇ ಈ ಹೊಸ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆಂದರು.

ಯಾವುದೇ ಆಕ್ರಮ ನಡೆದಿಲ್ಲ:
ಕೋವಿಡ್-19 ವಿಚಾರದಲ್ಲಿ ವೈದ್ಯಕೀಯ ಪರಿಕರಗಳ ಖದೀರಿಯಲ್ಲಿ ಆಕ್ರಮ ಆಗಿದೆಯೆಂಬ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿ ಹಾಕಿದ ಅವರು, ನನ್ನ ಮಾಹಿತಿ ಪ್ರಕಾರ ಯಾವುದೇ ಆಕ್ರಮ ಆಗಿಲ್ಲ. ಆಗಿದ್ದರೆ ನಾವು ತನಿಖೆ ನಡೆಸಲು ಸಿದ್ದರಿದ್ದೇವೆಂದರು. ಪಶು ಸಂಪತ್ತು ರಕ್ಷಿಸಬೇಕು ಎಂಬುದು ಮೋದಿ ಸಂಕಲ್ಪ. ಅದರಂತೆ ನಾವು ಪಶುಗಳನ್ನು ರೈತರಿಗೆ ಲಾಭದಾಯಕವಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಶುಗಳು ಕಸಾಯಖಾನೆಗೆ ಹೋಗಬಾರದೆಂದರು. ವಕ್‌ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಈ ಹಿಂದೆ ಮಾನ್ಪಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸುವ ರಾಜ್ಯದಲ್ಲಿ ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದೆಂದರು.

ಲಾಕ್‌ಡೌನ್ ಮಾಡಕ್ಕೆ ಆಗಲ್ಲ ನಮ್ಮ ಜೀವ ನಮ್ಮ ಕೈಯಲ್ಲಿದೆ:

ರಾಜ್ಯದಲ್ಲಿ ದಿನೇ ದಿನೇ ಮಹಾಮಾರಿ ಕೋವಿಡ್ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರದಲ್ಲಿ ಸಿಎಂ ಹಾದಿಯಾಗಿ ಎಲ್ಲ ಸಚಿವರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೋಂಕು ಹೆಚ್ಚಾಗುತ್ತಿದೆಯೆಂದು ಲಾಕ್‌ಡೌನ್ ಮಾಡಕ್ಕೆ ಆಗಲ್ಲ. ನಮ್ಮ ಜೀವ ನಮ್ಮ ಕೈಯಲ್ಲಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಬೇಕೆಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next