Advertisement

ಆ.15 ಕ್ಕೆ ʼಸಲಾರ್‌ʼ ಚಿತ್ರದಿಂದ ಬಿಗ್‌ ಅನೌನ್ಸ್‌ ಮೆಂಟ್‌: ಹೆಚ್ಚಾಯಿತು ಫ್ಯಾನ್ಸ್‌ ಕುತೂಹಲ

07:58 PM Aug 13, 2022 | Team Udayavani |

ಹೈದರಾಬಾದ್:‌ ಪ್ರಶಾಂತ್‌ ನೀಲ್‌ ನಿರ್ದೇಶನದ ಮುಂದಿನ ಚಿತ್ರ ʼಸಲಾರ್ʼ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು ಚಿತ್ರದ ಬಗ್ಗೆ ಹೊಸ ಅಪ್‌ ಡೇಟ್‌ ವೊಂದು ಬರಲಿದೆ ಎಂದು ಚಿತ್ರ ತಂಡ ಹೇಳಿದೆ.

Advertisement

ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ ʼಬಾಹುಬಲಿʼ ಆದ ಬಳಿಕ ಹೇಳುಕೊಳ್ಳುವಂತಹ ಮಟ್ಟಿಗೆ ಮಿಂಚಿಲ್ಲ. ಅವರ ʼಸಾಹೋʼ ಹಾಗೂ ʼರಾಧೆ ಶ್ಯಾಮ್‌ʼ ಸದ್ದು ಮಾಡಿತ್ತು ಬಿಟ್ಟರೆ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಕಮಾಯಿ ಮಾಡಲಿಲ್ಲ.

ಅವರು ಪ್ರಶಾಂತ್‌ ನೀಲ್‌ ಅವರೊಂದಿಗೆ ಸಿನಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಾಗಿನಿಂದ, ಮುಂದೆ ಗೆಲುವು ಖಂಡಿತ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಪ್ರಭಾಸ್‌ ಅಭಿಮಾನಿಗಳಿದ್ದಾರೆ.

ʼಕೆಜಿಎಫ್‌ -2ʼ ಬಳಿಕ ಪ್ರಶಾಂತ್‌ ನೀಲ್‌ ʼಸಲಾರ್‌ʼ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪೋಸ್ಟರ್‌ ನಲ್ಲಿ ಪ್ರಭಾಸ್‌ ರಗಡ್‌ ಲುಕ್‌ ನಲ್ಲಿ ಮಿಂಚಿದ್ದು, ಇದೊಂದು ಪಕ್ಕಾ ಮಾಸ್‌ ಮೂವಿ ಎನ್ನಲಾಗಿದೆ. ಪ್ರಶಾಂತ್‌ ನೀಲ್‌  ನಿರ್ದೇಶನ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಚಿತ್ರಕ್ಕಿರುವುದರಿಂದ  ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯೇ ಇದೆ.

ಇದನ್ನೂ ಓದಿ: ಹಾಲಿವುಡ್‌ನ‌ ಆಸ್ಕರ್‌ನಿಂದ ಹೊಗಳಿಕೆ ಪಡೆದ “ಲಾಲ್‌ ಸಿಂಗ್‌ ಛಡ್ಡಾ’ಸಿನಿಮಾ

Advertisement

ಬಹುದಿನಗಳಿಂದ ಚಿತ್ರದ ಬಗ್ಗೆ ಯಾವುದೇ ಅಪ್‌ ಡೇಟ್‌ ಗಳಿರಲಿಲ್ಲ. ಈಗ ಚಿತ್ರ ತಂಡ ಆ.15 ರಂದು ಹೊಸ ಮಾಹಿತಿ ನೀಡಲಾಗಿದೆ. ಆಗಸ್ಟ್‌ 15 ರಂದು ಮಧ್ಯಾಹ್ನ 12:58 ದೊಡ್ಡ ಅನೌನ್ಸ್‌ ಮೆಂಟ್‌ ಮಾಡಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಘೋಷಿಸಿದೆ. ಅದೇನಿರಬಹುದು ಎನ್ನುವುದು ಈಗ ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಕೆಜಿಎಫ್‌ ತಂತ್ರಜ್ಞರೇ ಈ ಚಿತ್ರ ಚಿತ್ರದಲ್ಲಿ ತಮ್ಮ ಕೈ ಚಳಕವನ್ನು ತೋರಿಸಲಿದ್ದಾರೆ.  ಮ್ಯೂಸಿಕ್‌ ನಲ್ಲಿ ರವಿ ಬಸ್ರೂರು, ಭುವನ್‌ ಗೌಡ ಕ್ಯಾಮಾರ ವರ್ಕ್‌ ನಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next