Advertisement

Salaar: ಈ ವರ್ಷ ರಿಲೀಸ್‌ ಆಗಲ್ಲ ಪ್ಯಾನ್‌ ಇಂಡಿಯಾ ʼಸಲಾರ್‌ʼ?: ಕಾರಣವೇನು?

06:22 PM Sep 21, 2023 | Team Udayavani |

ಹೈದರಾಬಾದ್: ಡಾರ್ಲಿಂಗ್‌ ಪ್ರಭಾಸ್‌ ಅವರ ʼಸಲಾರ್‌ʼ ಸಿನಿಮಾ ರಿಲೀಸ್‌ ಡೇಟ್‌  ಅನೌನ್ಸ್‌ ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರ ಸಿನಿಮಾ ತೆರೆಗೆ ಬರಬೇಕಿತ್ತು.

Advertisement

ಸೆ.28 ರಂದು ʼಸಲಾರ್‌ʼ ಸಿನಿಮಾ ರಿಲೀಸ್ ಆಗಲ್ಲ ಎಂದು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಹೇಳಿತ್ತು. ʼಸಲಾರ್‌ʼ ಸಿನಿಮಾಕ್ಕೆ ನೀವು ನೀಡುತ್ತಿರುವ ಬೆಂಬಲವನ್ನು ನಾವು ಶ್ಲಾಘಿಸುತ್ತೇವೆ. ಅನಿವಾರ್ಯ ಕಾರಣಗಳಿಂದಾಗಿ ಸಾವು ʼಸಲಾರ್‌ʼ ಸಿನಿಮಾವನ್ನು ಸೆ.28 ಕ್ಕೆ ರಿಲೀಸ್‌ ಮಾಡಲು ಆಗುತ್ತಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕ ಸಿನಿಮಾವನ್ನು ನಾವು ನೀಡಲು ಸಿದ್ದರಿದ್ದೇವೆ. ನಮ್ಮ ಈ ನಿರ್ಧಾರವನ್ನು ನೀವು ಗೌರವಿಸಿ, ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಸಿನಿಮಾವನ್ನು ಅತ್ಯುತ್ತಮ ರೀತಿಯಲ್ಲಿ ತೆರೆಗೆ ತರಲು ನಮ್ಮ ತಂಡ ಪ್ರಯತ್ನಿಸುತ್ತಿದೆ. ಹೊಸ ರಿಲೀಸ್‌ ಡೇಟ್‌ ಶೀಘ್ರದಲ್ಲಿ ಹೇಳಲಾಗುವುದೆಂದು ಹೊಂಬಾಳೆ ಟ್ವೀಟ್‌ ಮಾಡಿತ್ತು.

ಇನ್ನೇನು ಹೊಸ ರಿಲೀಸ್‌ ಡೇಟ್‌ ಗಣೇಶ ಹಬ್ಬಕ್ಕೆ ಅನೌನ್ಸ್‌ ಮಾಡುತ್ತಾರೆ ಅಂದುಕೊಂಡಿದ್ದ ಪ್ರೇಕ್ಷಕರಿಗೆ ನಿರಾಶೆಯಾಗಿದೆ. ಇದೀಗ ʼಸಲಾರ್‌ʼ ಸಿನಿಮಾ ರಿಲೀಸ್‌ ಡೇಟ್‌ ಮತ್ತಷ್ಟು ಮುಂದೂಡಿಕೆಯ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಮಾಡಿರುವ ಟ್ವೀಟ್‌ ʼಸಲಾರ್‌ʼ ಗಾಗಿ ಕಾಯುತ್ತಿರುವವರಿಗೆ ಶಾಕ್‌ ನೀಡಿದೆ.

“ಟ್ರೇಡ್ ಪ್ರಕಾರ ಪ್ಯಾನ್ ಇಂಡಿಯಾ ʼಸಲಾರ್‌ʼ ಸಿನಿಮಾ ಈ ವರ್ಷ ಬಿಡಗಡೆ ಆಗುವ ಸಾಧ್ಯತೆಯಿಲ್ಲ. 2024 ರಂದು ಸಿನಿಮಾ ರಿಲೀಸ್‌ ಆಗಲಿದೆ. ಉತ್ತಮ ಗುಣಮಟ್ಟದಲ್ಲಿ ಸಿನಿಮಾ ಮೂಡಿಬರಲು ಚಿತ್ರತಂಡ ನಿರಂತರ ಪರಿಶ್ರಮ ಹಾಕುತ್ತಿದೆ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ʼಸಲಾರ್ʼ ವಿಳಂಬಕ್ಕೆ ಕೆಲ ಕಾರಣಗಳಿವೆ ಎನ್ನಲಾಗುತ್ತಿದೆ. ಮುಖ್ಯವಾಗಿ ವಿಎಫ್‌ ಎಕ್ಸ್‌ ಕೆಲಸ ಬಾಕಿಯಿರುವುದರಿಂದಲೇ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಲು ಮುಖ್ಯ ಕಾರಣ ಎನ್ನಲಾಗಿದೆ.

Advertisement

ಆದರೆ ಪ್ರೇಕ್ಷಕರು ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬದಂದು ರಿಲೀಸ್‌ ಆಗುತ್ತದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಯಾವುದಕ್ಕೂ ಮುಂದಿನ ಅಪ್ಡೇಟ್‌ ವರೆಗೆ ಕಾದು ನೋಡಬೇಕಿದೆ.

ʼಸಲಾರ್‌ʼ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಶ್ರುತಿ ಹಾಸನ್, ಜಗಪತಿ ಬಾಬು, ತಿನ್ನು ಆನಂದ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next