Advertisement

Bollywood: ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ  ಪ್ರಭಾಸ್ ʼಆದಿಪುರುಷ್‌ʼ

03:25 PM May 11, 2023 | Team Udayavani |

ಮುಂಬಯಿ: ಈ ವರ್ಷದ ಬಹು ನಿರೀಕ್ಷಿತ ಬಿಗ್‌ ಬಜೆಟ್‌ ಚಿತ್ರಗಳಲ್ಲಿ ಒಂದಾಗಿರುವ ಪ್ರಭಾಸ್‌ ಅವರ ʼಆದಿಪುರುಷ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿ ಎಲ್ಲೆಡೆ ಭರ್ಜರಿ ಸೌಂಡ್‌ ಮಾಡುತ್ತಿದೆ. ಈ ನಡುವೆ ಸಿನಿಮಾದ ಟ್ರೇಲರ್‌ ಒಂದು ಹೊಸ ದಾಖಲೆಯನ್ನು ಬರೆದಿದೆ.

Advertisement

ʼಆದಿಪುರುಷ್‌ʼ ಚಿತ್ರಕ್ಕೆ ಓಂ ರಾವುತ್‌ ಅವರ ನಿರ್ದೇಶನವಿದೆ. “ಟಿ-ಸೀರಿಸ್‌ʼ ಸಂಸ್ಥೆ ನಿರ್ಮಾಣ ಮಾಡಿದ್ದು, ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಆಧರಿಸಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಸಿನಿಮಾದಲ್ಲಿ ಪ್ರಭಾಸ್‌ ʼರಾಘವʼನಾಗಿ, ಕೃತಿ ಸನೊನ್ ʼಜಾನಕಿʼ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್‌ ಆಲಿಖಾನ್‌ ರಾವಣನ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್‌ ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ವಿಎಫ್‌ ಎಕ್ಸ್‌, ಮ್ಯೂಸಿಕ್‌ ನಿಂದ ಟ್ರೇಲರ್‌ ಗಮನ ಸೆಳೆದಿದೆ. ಪ್ಯಾನ್‌ ಇಂಡಿಯಾದಲ್ಲಿ ಟ್ರೇಲರ್‌ ಸದ್ದು ಮಾಡಿದೆ. ಎಲ್ಲಾ ಭಾಷೆಯಲ್ಲಿ ಸೇರಿ ರಿಲೀಸ್‌ ಆದ 24 ಗಂಟೆಯಲ್ಲಿ ಟ್ರೇಲರ್‌ 70 ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆ ಕಂಡಿದೆ. ಆ ಮೂಲಕ 2023ರಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಟ್ರೇಲರ್‌ ಎಂಬ ಹೆಗ್ಗಳಿಕೆಯನ್ನು ʼಆದಿಪುರುಷ್‌ʼ ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೆ ಯೂಟ್ಯೂಬ್‌ ನಲ್ಲಿ ಟ್ರೇಲರ್‌  ನಂ. 1  ಆಗಿ ಟ್ರೆಂಡಿಂಗ್‌ ನಲ್ಲಿದೆ.

ಇದೇ ಜೂ.16 ರಂದು 3ಡಿಯಲ್ಲಿ ವಿಶ್ವಾದಂತ್ಯ ಸಿನಿಮಾ ತೆರೆಗೆ ಬರಲಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next