Advertisement

ಪ್ರಭಾಕರ ಕೋರೆ ಜೀವಂತ ಶಿಕ್ಷಣ ಸಂಸ್ಥೆ: ಧರ್ಮೇಂದ್ರ ಪ್ರಧಾನ್‌

11:27 PM Oct 15, 2022 | Team Udayavani |

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರೊಬ್ಬ ಜೀವಂತ ಶಿಕ್ಷಣ ಸಂಸ್ಥೆ ಎಂದು ಕೇಂದ್ರ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಜರಗಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದೇ ಮಾತಿನಲ್ಲಿ ಹೇಳುವುದಾದರೆ ಕೋರೆ ಅವರು ಮಾಡದ ಸಾಮಾಜಿಕ ಕೆಲಸ ಇಲ್ಲ. ಬಿಡದ ಕ್ಷೇತ್ರ ಇಲ್ಲ ಎಂದರು.

ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ಆಗಬೇಕಿದೆ. ಈ ಪರಿವರ್ತನೆ ಸದಾಚಾರದ ಪರಿವರ್ತನೆಯಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ ಎಂದರು.

ಕೀರ್ತಿ ಬೆಳೆಯಲಿ-ಬೆಳೆಸಲಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ಮನಸ್ಸು, ಕೃತಿ ಮತ್ತು ಮಾತಿನಲ್ಲಿ ಒಂದೇ ಆಗಿದ್ದವರು ಮಹಾನ್‌ ವ್ಯಕ್ತಿಗಳಾಗುತ್ತಾರೆ. ಸತು³ರುಷರಾಗುತ್ತಾರೆ. ಅದಕ್ಕೆ ಪ್ರಭಾಕರ ಕೋರೆ ಬಹಳ ಉತ್ತಮ ಉದಾಹರಣೆ ಎಂದರು.

ಬೊಮ್ಮಾಯಿ ಶ್ಲಾಘನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಭಾಕರ ಕೋರೆ ಅವರ ಕೈಯಲ್ಲಿ ಕೆಎಲ್‌ಇ ಸಂಸ್ಥೆ ಸುರಕ್ಷಿತವಾಗಿದೆ. 21ನೇ ಶತಮಾನಕ್ಕೆ ಏನು ಬೇಕೋ ಅದನ್ನು ಕೆಎಲ್‌ಇ ಸಂಸ್ಥೆಯ ಮೂಲಕ ಕೊಟ್ಟಿದ್ದಾರೆ. ಸದಾ ಕಾಲ ಹೊಸತನ ಹುಡುಕುವ ಹವ್ಯಾಸ ಅವರದ್ದು. ಅದರಿಂದಲೇ ಸಂಸ್ಥೆ ಇಂದು ಎಲ್ಲ ರಂಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದರು.

Advertisement

ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಮಾತನಾಡಿ, ಪ್ರಧಾನಿ ಮೋದಿ ಅವರ ನವ ಭಾರತ ಕನಸನ್ನು ಪ್ರಭಾಕರ ಕೋರೆ ನನಸು ಮಾಡುತ್ತಿದ್ದಾರೆ ಎಂದರು.

ಕೋರೆ ಸಾಧನೆ ಮಾದರಿ
ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಕೆಲವರನ್ನು ನೋಡಿದ ಕೂಡಲೇ ಜೀವನದಲ್ಲಿ ಉತ್ಸಾಹ ಮೂಡುತ್ತದೆ. ಜೀವನದಲ್ಲಿ ಏನಾ ದರೂ ಸಾಧಿಸಬೇಕೆಂಬ ಛಲ ಮೂಡುತ್ತದೆ. ಇದಕ್ಕೆ ಪ್ರಭಾಕರ ಕೋರೆ ಪ್ರತಿಯೊಬ್ಬರಿಗೂ ಮಾದರಿ ಯಾಗಿ ನಿಲ್ಲುತ್ತಾರೆ ಎಂದರು.

ಇದೇ ಸಂದರ್ಭ ಪ್ರಭಾಕರ ಕೋರೆ ಅವರಿಗೆ ಪುಸ್ತಕಗಳ ಮೂಲಕ ತುಲಾಭಾರ ನಡೆಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋರೆ ದಂಪತಿಯನ್ನು ಸರಕಾರದ ಪರವಾಗಿ ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next