Advertisement

“ಪ್ರಾಜೆಕ್ಟ್ ಕೆ’ನಲ್ಲಿ ನಟಿಸಲಿದ್ದಾರೆ ಪ್ರಭಾಸ್‌

02:04 AM Feb 06, 2023 | Team Udayavani |

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್‌ ಅವರ ಮುಂದಿನ ಸಿನೆಮಾ ಯಾವುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಅವರು ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ಸಿನೆಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.

Advertisement

ಇನ್ನೊಂದೆಡೆ ನಾಗ್‌ ಅಶ್ವಿ‌ನ್‌ ನಿರ್ದೇಶನದಲ್ಲಿ ಮೂಡಿಬರಲಿರುವ “ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ನಟಿಸಲು ಪ್ರಭಾಸ್‌ ಒಪ್ಪಿಕೊಂಡಿದ್ದಾರೆ. ಬಾಹುಬಲಿ, ಕೆಜಿಎಫ್ ರೀತಿ “ಪ್ರಾಜೆಕ್ಟ್ ಕೆ’ ಕೂಡ ಎರಡು ಸೀಕ್ವೆಲ್‌ಗ‌ಳಲ್ಲಿ ಬರಲಿದ್ದು, ಭಾಗ 1 ಮತ್ತು ಭಾಗ 2 ನಿರ್ದೇಶಿಸಲು ನಾಗ್‌ ಅಶ್ವಿ‌ನ್‌ ಮುಂದಾಗಿದ್ದಾರೆ ಎನ್ನಲಾಗಿದೆ.

ಬಾಹುಬಲಿ ಅನಂತರ ಪ್ರಭಾಸ್‌ ನಟನೆಯ ಸಿನೆಮಾಗಳು ಸೋತಿದ್ದರೂ ಅವರ ಖ್ಯಾತಿ ಏನೂ ಕಡಿಮೆ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next