Advertisement

ಕಟಪಾಡಿ – ಕಾಪು: ಮಟ್ಕಾ ಅಡ್ಡೆಗೆ ದಾಳಿ

09:39 PM May 28, 2023 | Team Udayavani |

ಕಾಪು: ಕಟಪಾಡಿ ಹಳೆ ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ರವಿ ಪೂಜಾರಿ ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಕಾಪು ಪೊಲೀಸ್‌ ಠಾಣೆಯ ಕ್ರೈಂ ಎಸ್‌ಐ ಭರತೇಶ್‌ ಕಂಕಣವಾಡಿ ಮತ್ತು ಸಿಬಂದಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ್ದು ದಾಳಿಯ ವೇಳೆ ಮಟ್ಕಾ ಚೀಟಿ ಬರೆಯುತ್ತಿದ್ದ ರವಿ ಪೂಜಾರಿ ಓಡಲು ಪ್ರಯತ್ನಿಸಿದ್ದು ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಬಂಧಿತನಿಂದ ಮಟ್ಕಾ ಚೀಟಿ ಬರೆಯಲು ಬಳಸಿದ ವಸ್ತುಗಳು, 990 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣ
ಕಾಪು ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಪಡುಬಿದ್ರಿ ನಿವಾಸಿ ಶ್ರೀನಿವಾಸ ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಕಾಪು ಪೊಲೀಸ್‌ ಠಾಣೆಯ ಎಸ್‌ಐ ಸುಮ ಮತ್ತು ಸಿಬಂದಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ್ದು ದಾಳಿಯ ವೇಳೆ ಮಟ್ಕಾ ಚೀಟಿ ಬರೆಯುತ್ತಿದ್ದ ಶ್ರೀನಿವಾಸ ಓಡಲು ಪ್ರಯತ್ನಿಸಿದ್ದು ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತನಿಂದ ಮಟ್ಕಾ ಚೀಟಿ ಬರೆಯಲು ಬಳಸಿದ ವಸ್ತುಗಳು, 1010 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next