ನವ ದೆಹಲಿ : ಒಬ್ಬ ವ್ಯಕ್ತಿಯು ವರ್ಷದಲ್ಲಿ ಇಪಿಎಫ್ ಅಥವಾ ಪಿಪಿಎಫ್ ನಲ್ಲಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದರೆ ಅದರ ಮೇಲೆ ತೆರಿಗೆ ಸಂಗ್ರಹಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಪ್ರಾವಿಡೆಂಟ್ ಫಂಡ್ ಖಾತೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಯಾರು ತಿಂಗಳಿಗೆ 85 ಸಾವಿರಗಳಿಗಿಂತ ಹೆಚ್ಚು ಸಂಬಳ ಪಡೆಯುವವರಿಗೆ ಮಾತ್ರ ಪರಿಣಾಮ ಬೀರಲಿದೆ.
ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಕುಸಿತ, 14,700ಕ್ಕೆ ಕುಸಿದ ನಿಫ್ಟಿ
ಮೂಲ ವೇತನದ ಶೇಕಡಾ 12 ರಷ್ಟು ಉದ್ಯೋಗಿ ಮತ್ತು ಶೇಕಡಾ 12 ರಷ್ಟು ಕಂಪನಿಯು ಠೇವಣಿ ಮಾಡುತ್ತದೆ. ವ್ಯಕ್ತಿಯ ವಾರ್ಷಿಕ ಪ್ಯಾಕೇಜ್ 10 ಲಕ್ಷದ 20 ಸಾವಿರ ಅಥವಾ ಮಾಸಿಕ 85 ಸಾವಿರ ರೂಪಾಯಿ ಆಗಿದ್ದಲ್ಲಿ ಈ ಹೊಸ ನಿಯಮ ಪರಿಣಾಮ ಬೀರುವುದಿಲ್ಲ. ಇದು 85 ಸಾವಿರಕ್ಕೂ ಹೆಚ್ಚು ಸಂಬಳ ಹೊಂದಿರುವ ಜನರ ಮೇಲೆ ಪರಿಣಾಮ ಬೀರಲಿದೆ.
ತೆರಿಗೆ ಉಳಿಸುವ ಉದ್ದೇಶದಿಂದ ಇಪಿಎಫ್ ನಲ್ಲಿ ಹೂಡಿಕೆ ಮಾಡುವವರನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ. ಮೂಲ ವೇತನದ ಶೇಕಡಾ 12 ರಷ್ಟು ಇಪಿಎಫ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಕೆಲವರು ತೆರಿಗೆ ಉಳಿತಾಯ ಮಾಡುವ ಉದ್ದೇಶದಿಂದ ಇಪಿಎಫ್ ಅಥವಾ ಪಿಪಿಎಫ್ ನಲ್ಲಿ ಹೆಚ್ಚಿನ ಹಣವನ್ನು ಠೇವಣಿ ಇಟ್ಟು ಉತ್ತಮ ಬಡ್ಡಿಯನ್ನು ಪಡೆಯುತ್ತಾರೆ. ಇಲ್ಲಿಯವರೆಗೆ ಇಪಿಎಫ್ ನಲ್ಲಿ ಮಾಡುವ ಹೂಡಿಕೆ ಮೇಲೆ ಯಾವುದೇ ತೆರಿಗೆ ವಿಧಿಸುತ್ತಿರಲಿಲ್ಲ. ಆದರೆ ಪ್ರಸಕ್ತ ಹಣಕಾಸು ವರ್ಷದಿಂದ ಈ ನಿಯಮ ಬದಲಾಗಲಿದೆ.
ನೌಕರರ ಠೇವಣಿಗಳ ಮೇಲಿನ ತೆರಿಗೆಯನ್ನು ಮಾತ್ರ ಹೇಳಲಾಗಿದೆ. ಉದ್ಯೋಗದಾತರು ಹಾಕುವ ಹಣದ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ.
ಏಪ್ರಿಲ್ 1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಓದಿ : ತಾಂತ್ರಿಕ ದೋಷದಿಂದ ಉತ್ಪಾದನೆ ಕುಂಠಿತ: ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ವಿದ್ಯುತ್