Advertisement
ಅವರು ಗಂಗಾವತಿಗೆ ಚಿತ್ರೀಕರಣಕ್ಕೆ ಆಗಮಿಸಿದ್ದ ವೇಳೆ ಉದಯವಾಣಿ ಜೊತೆ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆಗಿರುವ ಇತಿಹಾಸವಿದೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬ್ರೇಶ್, ಶಂಕರನಾಗ್ ಸೇರಿದಂತೆ ಕನ್ನಡ ಭಾಷೆ ನೆಲ, ಜಲದ ಬಗ್ಗೆ ಅಪಾರ ಗೌರವ ಹೊಂದಿದ ಕಲಾವಿದರಿಂದ ಇಡೀ ಭಾರತವೇ ಪ್ರೀತಿಸುವಂತೆ ನಡೆದುಕೊಂಡಿದ್ದಾರೆ. ಈಗ ಕೆಲ ಸಿನೆಮಾ ಕಲಾವಿದರು ಡ್ರಗ್ಸ್ ದಂಧೆಯಲ್ಲಿರುವುದನ್ನು ಕಂಡರೆ ನೋವಾಗುತ್ತದೆ. ಸಿನೆಮಾಗಳಿಂದ ಯುವಜನರು ಪಾಠ ಕಲಿಯುತ್ತಾರೆ.
Related Articles
Advertisement
ಕಳೆದ 7 ತಿಂಗಳಿಂದ ಕೊರೊನಾ ರೋಗದ ಪರಿಣಾಮ ಚಿತ್ರಕಲಾವಿದರು, ತಂತ್ರಜ್ಞರು ಕೆಲಸವಿಲ್ಲದೆ ಬಹಳ ಕಷ್ಟ ಅನುಭವಿಸಿದ್ದಾರೆ. ಇದೀಗ ಕೇಂದ್ರ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಚಿತ್ರೀಕರಣ ಮತ್ತು ಸಿನೆಮಾ ಪ್ರದರ್ಶನಕ್ಕೆ ಅವಕಾಶ ದೊರಕಿದ್ದು ಕಲಾವಿದರಿಗೆ ನೆರವಾಗಿದೆ.
ಸಾಮಾಜಿಕ ಅಂತರ ಕೋವಿಡ್ ಸುರಕ್ಷತಾ ನಿಯಮಪಾಲನೆ ಮೂಲಕ ಚಿತ್ರೀಕರಣ ನಡೆಸಲಾಗುತ್ತಿದೆ. ಅಭಿಮಾನಿಗಳು ಪೊಟೊ ಹಾಗೂ ಕೈ ಕುಲುಕಲು ಆಸೆಯಿಂದ ಬರುತ್ತಿದ್ದು ಅವರ ಜತೆ ಬೆರೆಯಲು ಆಗುತ್ತಿಲ್ಲ. ಅಭಿಮಾನಿಗಳು ನಮ್ಮೊಂದಿಗೆ ಸಹಕರಿಸುವಂತೆ ಪುನೀತ್ ರಾಜ್ ಕುಮಾರ್ ಮನವಿ ಮಾಡಿದರು.