Advertisement

ವಿದ್ಯುತ್‌ ಅಭಾವ: ಆನೆದಾಳಿಯಿಂದ ರೈತರಿಗೆ ಸಮಸ್ಯೆ

05:53 PM Sep 24, 2022 | Team Udayavani |

ಬಂಗಾರಪೇಟೆ: ತಾಲೂಕಿನ ಗಡಿಭಾಗದಲ್ಲಿ ವಿದ್ಯುತ್‌ ಇಲ್ಲದೆ ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ಹಾಗೂ ಪ್ರಾಣ ಹಾನಿ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ಆಸ್ತಿಯನ್ನು ಹರಾಜು ಹಾಕಿ ನೊಂದ ರೈತರಿಗೆ ಪರಿಹಾರ ನೀಡುವ ಚಳುವಳಿಯನ್ನು ಮಾಡಬೇಕಾಗು ತ್ತದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಕಾಮಸಮುದ್ರದಲ್ಲಿ ರೈತ ಸಂಘದಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ತಾಲೂಕಿನ ಗಡಿಭಾಗಗಳಲ್ಲಿ ಗುಣಮಟ್ಟದ 24 ತಾಸು ವಿದ್ಯುತ್‌ ನೀಡಿ ಕಾಡನೆಗಳಿಂದ ರೈತರ ಪ್ರಾಣ ಹಾಗೂ ಬೆಳೆ ಹಾನಿಯನ್ನು ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.

ಹತ್ತಾರು ವರ್ಷ ಗಳಿಂದ ಗಡಿ ಭಾಗಗಳಾದ ಕಾಮಸಮುದ್ರ ಹಾಗೂ ಬೂದಿಕೋಟೆ ವ್ಯಾಪ್ತಿಯಲ್ಲಿ ಕಾಡಾನೆ ಗಳ ಹಾವಳಿಯಿಂದ ಜನ ಸಾಮಾನ್ಯರನ್ನು ರಕ್ಷಣೆ ಮಾಡಲು ಶಾಶ್ವತ ಪರಿಹಾರ ಕಲ್ಪಿಸು ವಲ್ಲಿ ಸರ್ಕಾರ ಅರಣ್ಯ ಇಲಾಖೆ ಸಂಪೂರ್ಣ ವಾಗಿ ವಿಫ‌ಲವಾಗಿದ್ದಾರೆ. ಜೊತೆಗೆ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷೆಯಿಂದ ಪ್ರತಿ ವರ್ಷ ರೈತರ ಪ್ರಾಣಹಾನಿ ಬೆಳೆ ಹಾನಿ ಸಂಭಸುತ್ತಿದ್ದರು ಮೌನವಸಿರುವ ಜನ ಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ಮುಂಗಾರು ಮಳೆ ಆರ್ಭಟಕ್ಕೆ ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಖಾಸಗಿ ಸಾಲಕ್ಕೆ ಸಿಲುಕಿ ತೊಂದರೆಯಲ್ಲಿರುವ ಸಮಯದಲ್ಲಿ ಮತ್ತೆ ಖಾಸಗಿ ಸಾಲ ಮಾಡಿ ಬೆಳೆದಿರುವ ಬೆಳೆ ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಲು ತಮ್ಮ ಪ್ರಾಣದ ಅಂಗನ್ನು ತೊರೆದು ಬೆಳೆ ರಕ್ಷಣೆ ಮಾಡಲು ಮುಂದಾಗಿರುವ ರೈತರಿಗೆ ಬೆಸ್ಕಾಂ ಅಧಿಕಾರಿಗಳ ರೈತ ರೋಧಿ ದೋರಣೆಯಿಂದ ಕತ್ತಲಲ್ಲಿ ಜೀವಿಸಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ಜನಪ್ರತಿನಿಧಿಗಳು ವಿದ್ಯುತ್‌ ನೀಡುತ್ತೇವೆಂದು ಗಡಿಭಾಗದ ಜನರ ಮೇಲೆ ದೌರ್ಜನ್ಯ ಮಾಡುತ್ತಾರೆಂದು ಆರೋಪ ಮಾಡಿದರು.

ಬೆಸ್ಕಾಂ ಎಇಇ ರಾಮಕೃಷ್ಣಪ್ಪ ಮನವಿ ಸ್ವೀಕರಿಸಿ, ಗಡಿಭಾಗದ ಸಮಸ್ಯೆ ಇರುವುದರಿಂದ ಮೇಲಾಧಿಕಾರಿಗಳ ಗಮನಕ್ಕೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

Advertisement

ಕಾಮಸಮುದ್ರ ಸಬ್‌ ಇನ್ಸ್‌ ಪೆಕ್ಟರ್‌ ವಿಠಲ್‌ ತಳ್ವಾರ್‌ ಹಾಜರಿದ್ದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಬೂದಿಕೋಟೆ ನಾಗಯ್ಯ, ಮುನಿರಾಜು, ವಿಶ್ವ, ಕದರಿನತ್ತ ಅಪ್ರೋಜಿರಾವ್‌, ಲಕ್ಷ್ಮಣ್‌, ಸುರೇಶ್‌ಬಾಬು, ಗೋವಿಂದಪ್ಪ, ಸಂದೀಪ್‌ ರೆಡ್ಡಿ, ಸಂದೀಪ್‌ಗೌಡ, ಕಿರಣ್‌, ವೇಣು, ನಾರಾಯಣಸ್ವಾಮಿ, ಗುರುಮೂರ್ತಿ, ಪ್ರಶಾಂತ್‌ರೆಡ್ಡಿ, ಶ್ರೀನಿವಾಸರೆಡ್ಡಿ, ಸುರೇಶ್‌ ಬಾಬು, ಮಾಲೂರು ಯಲ್ಲಣ್ಣ, ಹರೀಶ್‌, ಮಂಗಸಂದ್ರ ತಿಮ್ಮಣ್ಣ, ಕಿರಣ್‌, ಚಾಂದ್‌ ಪಾಷ, ಬಾಬಾಜಾನ್‌, ಮಹಮದ್‌ ಷೋಯಿಬ್‌ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next