Advertisement

ವಿದ್ಯುತ್‌ ಕಡಿತ: ದುರ್ಬಲ ಎಚ್‌ಟಿ ಲೈನ್‌, ತಾಂತ್ರಿಕ ದೋಷ ಕಾರಣ

11:59 AM Mar 29, 2018 | |

ಪುತ್ತೂರು: ವಿದ್ಯುತ್‌ ಎಚ್‌.ಟಿ. ಲೈನ್‌ನ ದುರ್ಬಲ ಧಾರಣ ಸಾಮರ್ಥ್ಯ,ಸಣ್ಣ ಮಟ್ಟಿನ ತಾಂತ್ರಿಕ ದೋಷ ಕಂಡುಬಂದರೂ ದುರಸ್ತಿಗಾಗಿ ಮಂಗಳೂರಿನಿಂದ ಸಿಬಂದಿ ಬರಬೇಕಾದ ಅನಿವಾರ್ಯತೆ ಉಭಯ ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ.

Advertisement

220 ಕೆ.ವಿ. ನೆಟ್ಲ ಮುಟ್ನೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಎಚ್‌.ಟಿ. ಲೈನ್‌ನಲ್ಲಿ ನಿರಂತರ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ಇದರ ಪರಿಣಾಮ ಪದೇ ಪದೇ ಪುತ್ತೂರು ಹಾಗೂ ಸುಳ್ಯ ಉಭಯ ತಾ|ಗಳಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆ ಅನಿರೀಕ್ಷಿತವಾಗಿ ವ್ಯತ್ಯಯಗೊಳ್ಳುತ್ತಿದೆ.

ಪ್ರಸ್ತುತ ಪುತ್ತೂರು ಮತ್ತು ಸುಳ್ಯ ತಾಲೂಕುಗಳ ವಿದ್ಯುತ್‌ ಪೂರೈಕೆ ನಿರ್ವ ಹಣೆಯನ್ನು 110 ಕೆ.ವಿ. ವಿದ್ಯುತ್‌ ಉಪಕೇಂದ್ರದಿಂದ ಮಾಡಲಾಗುತ್ತಿದೆ. ಆದರೆ ದಿನ ಕಳೆದಂತೆ ಈ ಕೇಂದ್ರಕ್ಕೆ ಒತ್ತಡ ಅಧಿಕವಾಗುತ್ತಿದೆ. ಒಂದೆಡೆ ಅಧಿಕ ಒತ್ತಡದ ಜತೆಗೆ ಮೆಸ್ಕಾಂ ಅಧಿಕಾರಿಗಳು ಹೇಳಿಕೊ ಳ್ಳದಿದ್ದರೂ ಹಳೆಯಸಾಮಗ್ರಿಗಳ ಬಳಕೆಯಿಂದ ಲೈನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಕೊಳ್ಳುತ್ತಿರುವುದು ಸತ್ಯ. ಕೇಮಾರು ಉಪಕೇಂದ್ರ, ನೆಟ್ಲ ಮುಟ್ನೂರು ಉಪಕೇಂದ್ರ ಹಾಗೂ ಪುತ್ತೂರು ಉಪ ಕೇಂದ್ರದ ಎಚ್‌.ಟಿ. ಲೈನ್‌ನಲ್ಲಿ ಹಲವು ವರ್ಷಗಳಿಂದ ಇಂತಹ ಸಮಸ್ಯೆ ಇದ್ದರೂ ಪರ್ಯಾಯ ಕ್ರಮ ಕೈಗೊಂಡಿಲ್ಲ.

ಉಭಯ ತಾಲೂಕು ಗಳಲ್ಲಿ ಪುತ್ತೂರು 110 ಕೆ.ವಿ. ವಿದ್ಯುತ್‌ ಉಪ ಕೇಂದ್ರದಿಂದ ಸರಬರಾಜಾಗುವ ವಿದ್ಯುತ್‌ನ್ನು ನಂಬಿ
ಲಕ್ಷಾಂತರ ಮಂದಿ ಇದ್ದಾರೆ. ಅನಿರೀಕ್ಷಿತ ವಿದ್ಯುತ್‌ ವ್ಯತ್ಯಯ ಕೈಗಾರಿಕೆ -ಕಚೇರಿಗಳಿಗೆ, ರೈತರಿಗೆ, ಜನಸಾಮಾನ್ಯರಿಗೆ ಹೊಡೆತ ನೀಡುತ್ತಿದೆ. ಬೇಸಗೆಯಲ್ಲಂತೂ ವಿದ್ಯುತ್‌ ಸಮಸ್ಯೆಗೆ ಜನಸಾಮಾನ್ಯರು ಹೈರಾಣಾಗಿದ್ದಾರೆ.

ಕಷ್ಟ -ನಷ್ಟ
ಮೆಸ್ಕಾಂ ಅಧಿಕಾರಿಗಳು ಹಲವು ವಿಚಾರಗಳನ್ನು ಮುಚ್ಚಿಟ್ಟು ಎಲ್ಲವೂ ಸರಿ ಎನ್ನುವಂತೆ ಸಭೆಗಳಲ್ಲಿ ಮಾತನಾಡುತ್ತಾರೆ.
ಪುತ್ತೂರು ನಗರ ಒಂದರಲ್ಲೇ ವಾರದಲ್ಲಿ ಹಗಲು ಸಮಯದಲ್ಲೇ ಹಲವು ಬಾರಿ ವಿದ್ಯುತ್‌ ಕಡಿತವಾಗುತ್ತದೆ. ಇದರಿಂದ ನಿರಂತರ ಕಷ್ಟ -ನಷ್ಟಗಳಾಗುತ್ತಿವೆ. ಮಾಮೂಲು ದುರಸ್ತಿಯನ್ನು ಹೊರ ತುಪಡಿಸಿ ಈ ವಾರದ ಅಂತರದಲ್ಲಿ 2 ಬಾರಿ ಜಂಪರ್‌ ಕನೆಕ್ಷನ್‌ ತುಂಡಾದ ಹಿನ್ನೆಲೆಯಲ್ಲಿ 7-8 ತಾಸುಗಳ ಕಾಲ ವಿದ್ಯುತ್‌ ವ್ಯತ್ಯಯವಾಗಿತ್ತು ಎನ್ನುವುದು ಸಾರ್ವಜನಿಕ ಆರೋಪ.

Advertisement

ಮಂಗಳೂರಿನಿಂದ ಬರಬೇಕು
ನೆಟ್ಲ ಮುಟ್ನೂರು 220 ಕೆ.ವಿ. ಉಪಕೇಂದ್ರ ಮತ್ತು ಪುತ್ತೂರು 110 ಕೆ.ವಿ. ಪುತ್ತೂರು ಉಪ ಕೇಂದ್ರ ವ್ಯಾಪ್ತಿಯ ಎಚ್‌.ಟಿ. ವಿದ್ಯುತ್‌ ಲೈನ್‌ನ ನಿರ್ವಹಣೆಯನ್ನು ಕೆಪಿಟಿಸಿಎಲ್‌ ನೋಡಿಕೊಳ್ಳುತ್ತಿದೆ. ಎಂತಹ ತಾಂತ್ರಿಕ ದೋಷ ಕಂಡುಬಂದರೂ ಮಂಗಳೂರಿನಿಂದ ತಜ್ಞ ಸಿಬಂದಿ ಬಂದು ದುರಸ್ತಿ ಮಾಡಬೇಕಿದೆ. ಸ್ಥಳೀಯವಾಗಿ ತಂತ್ರಜ್ಞರ ತಂಡ ಇಲ್ಲ. ತಂಡ ಮಂಗಳೂ ರಿನಿಂದ ಬಂದು ತಾಂತ್ರಿಕ ದೋಷವನ್ನು ಪತ್ತೆ ಮಾಡಿ ವಿದ್ಯುತ್‌ ಸಂಪರ್ಕ ಮರು ಸ್ಥಾಪಿಸಲು ಕನಿಷ್ಟ 4 ಗಂಟೆ ಹಿಡಿಯುತ್ತದೆ. ಹಲವು ವರ್ಷಗಳಿಂದ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತಿದೆ.

ವಿದ್ಯುತ್‌ ಲೈನ್‌ನಲ್ಲಿ ಒತ್ತಡ
ಮಾಡಾವು ಸಬ್‌ಸ್ಟೇಷನ್‌ ಕಾಮಗಾರಿ ಪೂರ್ಣಗೊಂಡರೆ ಸುಳ್ಯ ತಾಲೂಕಿನ ಶೇ. 50ರಷ್ಟು ವಿದ್ಯುತ್‌ ಸಮಸ್ಯೆ ಕಡಿಮೆಯಾಗುತ್ತದೆ. ಪ್ರಸ್ತುತ ನೆಟ್ಲಮುಟ್ನೂರು 110 ಕೆ.ವಿ. ವಿದ್ಯುತ್‌ ಲೈನ್‌ನಲ್ಲಿ ಒತ್ತಡ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. 110 ಕೆ.ವಿ. ಲೈನ್‌ನ ದುರಸ್ತಿಗೆ ಮಂಗಳೂರಿನ ತಂತ್ರಜ್ಞರ ತಂಡವೇ ಬರಬೇಕು.
– ರಾಮಚಂದ್ರ ಎಂ.
ಸಹಾಯಕ ಕಾರ್ಯನಿರ್ವಾಹಕ
ಎಂಜಿನಿಯರ್ 

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next