Advertisement
ಗಣಿತ ಪ್ರಪಂಚದಲ್ಲಿ ಜಗತ್ತನ್ನೇ ಬೆರಗಾಗಿಸಿದ್ದ, ಭಾರತ ಕಂಡ ಸರ್ವಶ್ರೇಷ್ಠ ಗಣಿತಜ್ಞ ರಾಮಾನುಜನ್ ಅವರು ಅತ್ಯಂತ ಬಡ ಕುಟುಂಬದಲ್ಲಿ 1887ರ ಡಿಸೆಂಬರ್ 22ರಂದು ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದರು.
Related Articles
Advertisement
ಇಂತಹ ಗಣಿತ ಸೂತ್ರಗಳನ್ನು ತಾನು ಹಿಂದೆಂದೂ ನೋಡಿಯೇ ಇರಲಿಲ್ಲವೆಂದು ತಿಳಿಸುತ್ತಾ, ಇಂತಹ ಅದ್ಭುತವಾದ ಸೂತ್ರಗಳನ್ನು ರಚಿಸಿರುವ ವ್ಯಕ್ತಿ ಪ್ರಥಮ ದರ್ಜೆಯ ಗಣಿತಜ್ಞನೇ ಆಗಿರಬೇಕೆಂಬ ನಿರ್ಣಯಕ್ಕೆ ಬಂದರು.
ಹಾರ್ಡಿಯಂತಹ ಮಹಾನ್ ಗಣಿತಜ್ಞನೇ ಆ ಸೂತ್ರ, ಪ್ರಮೇಯಗಳನ್ನು ಇಷ್ಟೊಂದು ಮೆಚ್ಚಿಕೊಂಡು ಪ್ರಶಂಸಿರುವುದನ್ನು ನೋಡಿದಾಗ ರಾಮಾನುಜನ್‌ರಲ್ಲಿದ್ದ ಗಣಿತದ ಪ್ರತಿಭೆ ಎಷ್ಟೊಂದು ಆಳವಾಗಿತ್ತೆಂಬುದನ್ನು ತೋರಿಸುತ್ತದೆ. ನಂತರ ಹಾರ್ಡಿಯವರು ರಾಮಾನುಜನ್‌ರಿಗೆ ಮರು ಉತ್ತರ ಬರೆದು, ಎಚ್.ಎಲ…. ನೆವಿಲ್ ಎನ್ನುವವರು ಉಪನ್ಯಾಸ ನೀಡಲು ಮದರಾಸಿಗೆ ಬಂದಿದ್ದು ಅವರನ್ನು ಭೆಟ್ಟಿಯಾಗಬೇಕೆಂದೂ,ಅವರಿಂದ ಅತ್ಯುತ್ತಮ ಸಲಹೆ ದೊರೆಯು ವುದಾಗಿಯೂ ತಿಳಿಸಿದರು. ಆ ಪ್ರಕಾರ ರಾಮಾನುಜನ್ ಅವರು ನೆವಿಲ್‌ರನ್ನು ಭೇಟಿಯಾಗಿ ಹಲವಾರು ಗಣಿತದ ವಿಷಯಗಳನ್ನು ಚರ್ಚಿಸಿದರು.
ರಾಮಾನುಜನ್‌ರ ಗಣಿತದ ವಿದ್ವತ್ತನ್ನು ಪರೀಕ್ಷಿಸಿದ ಅವರು ಹಾರ್ಡಿಯವರ ಆದೇಶದ ಮೇರೆಗೆ ಉನ್ನತ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಬರುವಂತೆ ಆಹ್ವಾನ ನೀಡಿದರು. ಮೊದ ಮೊದಲು ನಿರಾಕರಿಸಿದರೂ ನಂತರ ಒಪ್ಪಿಕೊಂಡು ಇಂಗ್ಲೆಂಡಿಗೆ ತೆರಳಿದರು ರಾಮಾ ನು ಜ ನ್. ನಂತರ ಕೇಂಬ್ರಿಜ್‌ಗೆ ತೆರಳಿ ಹಾರ್ಡಿಯವರನ್ನು ಭೇಟಿಯಾದರು. ಹೀಗೆ ಹಾರ್ಡಿಯವರ ನಿರಂತರ ಮಾರ್ಗದರ್ಶನದಲ್ಲಿ ಮುಂದುವರೆದು 1917ರಲ್ಲಿ ರಾಮಾನುಜನ್‌ರಿಗೆ ಅವರು ಕೆಲಸ ಮಾಡುತ್ತಿದ್ದ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಗೌರವ ಸಿಕ್ಕಿತು. 1928ರಲ್ಲಿ ಫೆಲೋ ಆಫ್ ದ ರಾಯಲ್ ಸೊಸೈಟಿ (ಎಫ್.ಆರ್.ಎಸ್) ಗೌರವ ಸಿಕ್ಕಿತು.
ಸಾಧನೆಯ ಹಾದಿಯಲ್ಲಿ ಚಲಿಸುತ್ತಿದ್ದ ಈ ಮಹಾನ್ ಗಣಿತಜ್ಞನಿಗೆ ಬರಸಿಡಿಲಿನಂತೆ ಬಂದೆರಗಿತು ಕ್ಷಯರೋಗ. ಈ ಆಘಾತದಿಂದ ಹೊರಬರಲು ಸಾಧ್ಯವಾಗದೇ ಕೊನೆಗೆ ಮರಳಿ ಭಾರತದತ್ತ ಪ್ರಯಾಣ ಬೆಳೆಸಿದರು. 1920 ಏಪ್ರಿಲ್ 26 ರಂದು ತಮ್ಮ 32ನೇ ವಯಸ್ಸಿನಲ್ಲಿ ತೀರಿಕೊಂಡರು.
ಗಣಿತವು ರೂಢಿಗತ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಬದಲಾಗಿ ಆವಿಷ್ಕಾರ ಹಾಗೂ ಸೃಜನಶೀಲತೆಯ ವಿಷಯವಾಗಿ ಹೊರಹೊಮ್ಮಬೇಕಾ ಗಿದೆ. ಒಂದು ಸಮಸ್ಯೆಗೆ ಕೇವಲ ಪರಿಹಾರ ತಿಳಿಯುವುದಕ್ಕಿಂತ ಆ ಸಮಸ್ಯೆಯನ್ನು ಪರಿಹರಿಸಲು ಅಳವಡಿಸುವ ವಿಧಾನಗಳ ತಾರ್ಕಿಕ ಆಲೋಚನೆಗಳು ತುಂಬಾ ಮಹತ್ವದ್ದು. ಇದು ಕಲಿಯುವವನಲ್ಲಿ ತಾರ್ಕಿಕವಾಗಿ ಆಲೋಚಿ ಸುವುದನ್ನು ಬೆಳೆಸಿದರೆ, ಅವರನ್ನು ತಮ್ಮದೇ ಆದ ವಿಧಾನದಲ್ಲಿ ಪರಿಹಾರವನ್ನು ಕಂಡುಹಿಡಿಯಲು ಸಮರ್ಥರನ್ನಾಗಿಸುವುದಲ್ಲದೇ ಅವರನ್ನು ಸುಮ್ಮನೆ ಕೇಳುವವರನ್ನಾಗಿಸದೇ ಕ್ರಿಯಾಶೀಲ ಭಾಗಿಗಗಳನ್ನಾಗಿ ಸುತ್ತದೆ. ಗಣಿತದ ತತ್ವಗಳನ್ನು ನಿತ್ಯ ಜೀವನಕ್ಕೆ ಅನ್ವಯಿಸಿಕೊಂಡು ಕಲಿಯುವುದರಿಂದ ಗಣಿತವನ್ನು ಸುಲಭವಾಗಿ ಹಾಗೂ ಬಹಳ ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಕಲಿಯಬಹುದು.
– ರಾಜು ಭೂಶೆಟ್ಟಿ, ಹುಬ್ಬಳ್ಳಿ