Advertisement

2020-21ರ ಅವಧಿಯಲ್ಲಿ ಭಾರತದ ಬಡತನ  ಶೇ.17.9ಕ್ಕೆ ಕುಸಿತ

01:19 AM Jun 28, 2022 | Team Udayavani |

ಹೊಸದಿಲ್ಲಿ: ಭಾರತದಲ್ಲಿ 2011-12ರ ಅವಧಿಯಲ್ಲಿ ಶೇ.21.9ರಷ್ಟಿದ್ದ ಬಡತನ ಅನುಪಾತವು 2020-21ರ ವೇಳೆಗೆ ಶೇ.17.9ಕ್ಕೆ ಕುಸಿದಿದೆ. ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ(ಎಸ್‌ಬಿಐ)ದ ಎಕೋರ್ಯಾಪ್‌ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.

Advertisement

2017ರಿಂದೀಚೆಗೆ ಭಾರತದಲ್ಲಿ ಆದಾಯ ಅಸಮಾನತೆ ಕಡಿಮೆಯಾಗಿದೆ. ನೋಟು ಅಮಾನ್ಯಿಕರಣವಾದ ವರ್ಷದಲ್ಲಿ ಕುಸಿಯಲಾರಂಭಿಸಿದ ಆದಾಯ ಅಸಮಾನತೆ ಕೊರೊನಾ ಸಮಯದಲ್ಲಿಯೂ ಕುಸಿದಿದೆ.

ಶ್ರೀಮಂತರ ಆದಾಯದಲ್ಲಿ ಕುಸಿತ ಕಂಡುಬಂದಿದೆ ಎಂದು ವರದಿಯು ತಿಳಿಸಿದೆ.

ಹಾಗೆಯೇ 2001-02ರ ಸಮಯದಲ್ಲಿ 18,118 ರೂ. ಇದ್ದ ರಾಜ್ಯಗಳ ಸರಾಸರಿ ಆದಾಯ, 2011-12ರಲ್ಲಿ 68,845 ರೂ. ತಲುಪಿದೆ. 2021-22ರಲ್ಲಿ 1,74,024 ರೂ.ಗೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಸ್ಸಾಂ, ಬಿಹಾರ, ಛತ್ತೀಸಗಢ, ಮಧ್ಯಪ್ರದೇಶ, ಉತ್ತರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಲದಲ್ಲಿ ಬಡತನ ಕಡಿಮೆಯಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next