Advertisement

ನೇಮಕಕ್ಕೆ ಸರಕಾರ ಹಿಂದೇಟು: ಕೃಷಿ,ಆರೋಗ್ಯ, ಶಿಕ್ಷಣ,ಗೃಹ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಖಾಲಿ

12:28 AM Aug 11, 2022 | Team Udayavani |

ಇತ್ತೀಚೆಗಷ್ಟೇ 10 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕೇಂದ್ರ ಸರಕಾರ ಪ್ರಕ್ರಿಯೆ ಆರಂಭಿಸಿರುವುದಾಗಿ ರಾಜ್ಯಸಭೆಯಲ್ಲೇ ಈಗಾಗಲೇ ಮಾಹಿತಿ ನೀಡಿದೆ. ಈ ಮಾತು ರಾಜ್ಯ ಸರಕಾರಕ್ಕೆ ಸ್ಫೂರ್ತಿಯಾಗಿ ಖಾಲಿ ಇರುವ ಹುದ್ದೆ ಭರ್ತಿಗೆ ಮುಂದಾದೀತೇ ಎಂದು ಕಾದು ನೋಡಬೇಕಿದೆ.

Advertisement

ಬೆಂಗಳೂರು: “ಸ್ಟಾಫ್ ಇಲ್ಲ, ನಾಳೆ ಬನ್ನಿ…’ ಇದು ಯಾವುದೇ ಸರಕಾರಿ ಇಲಾಖೆಯ ಕಚೇರಿಗೆ ತೆರಳಿದರೂ ಸಿಗುವ ಉತ್ತರ!

ಒಂದೆಡೆ ರಾಜ್ಯದಲ್ಲಿ ಲಕ್ಷಾಂತರ ಯುವಜನರ ಸರಕಾರಿ ಉದ್ಯೋಗದ ಕನಸು ಈಡೇರದೆ ಕಮರುತ್ತಿದ್ದರೆ, ಇನ್ನೊಂ ದೆಡೆ ಶೇ.32ರಷ್ಟು ಹುದ್ದೆಗಳು ಖಾಲಿ ಉಳಿದಿವೆ.

ಕೃಷಿ, ಆರೋಗ್ಯ, ಶಿಕ್ಷಣ, ಕಂದಾಯ, ಗ್ರಾಮೀಣಾ ಭಿವೃದ್ಧಿ, ಗೃಹ ಮತ್ತಿತರ ಇಲಾಖೆಗಳಲ್ಲಿ ದೊಡ್ಡ ಮಟ್ಟದಲ್ಲಿ ಹುದ್ದೆಗಳು ಖಾಲಿ ಇವೆ. ಇದರ ನೇರ ಪರಿಣಾಮ ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಬೀಳುತ್ತಿದೆ. ಸರಕಾರದ ಅಧಿಕೃತ ಮಾಹಿತಿಯಂತೆ ವಿವಿಧ 44 ಇಲಾ ಖೆಗಳಲ್ಲಿ 2.52 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. 2021-22ನೇ ಸಾಲಿನ ಇಲಾಖಾವಾರು ಮಂಜೂರಾದ 7.68 ಲಕ್ಷ ಹುದ್ದೆಗಳ ಪೈಕಿ 5.16 ಲಕ್ಷ ಹುದ್ದೆಗಳು ಮಾತ್ರ ಭರ್ತಿಯಾಗಿವೆ.

ಕೃಷಿ- 6 ಸಾವಿರ, ಪಶುಸಂಗೋಪನೆ- 9 ಸಾವಿರ, ಒಳಾಡಳಿತ- 28 ಸಾವಿರ, ಗ್ರಾಮೀಣಾಭಿವೃದ್ಧಿ- 9 ಸಾವಿರ, ಕಂದಾಯ- 10 ಸಾವಿರ, ಪ್ರಾಥಮಿಕ ಶಿಕ್ಷಣ- 58 ಸಾವಿರ, ಉನ್ನತ ಶಿಕ್ಷಣ- 12 ಸಾವಿರ, ಆರೋಗ್ಯ ಇಲಾಖೆಯಲ್ಲಿ 34 ಸಾವಿರ ಹುದ್ದೆಗಳು ಖಾಲಿ ಇವೆ.

Advertisement

ಮಂಜೂರಾದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ಕೊಂಡರೆ ವೇತನ-ಭತ್ತೆಗಾಗಿ ಸರಕಾರಕ್ಕೆ ವಾರ್ಷಿಕ 8ರಿಂದ 9 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದೇ ಕಾರಣದಿಂದ ಹುದ್ದೆ ಭರ್ತಿಗೆ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನಲಾಗುತ್ತಿದೆ.

ಇದಲ್ಲದೆ, ನೇಮಕ ಅಕ್ರಮ, ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಆಗಾಗ ನ್ಯಾಯಾಲಯಗಳಲ್ಲಿ
ಪ್ರಶ್ನಿಸುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ವಾಗುತ್ತಿದೆ. ಯಾವುದೇ ಹುದ್ದೆಗಳ ಭರ್ತಿಗೆ ಕನಿಷ್ಠ ಒಂದೆರಡು ವರ್ಷ ಬೇಕು. ಐದಾರು ವರ್ಷಗಳಿಂದ ನೇಮಕಾತಿ ಆಗದ ಪ್ರಕರಣಗಳಿವೆ. ಚುನಾವಣ ನೀತಿ ಸಂಹಿತೆಗಳೂ ಖಾಲಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿವೆ ಎಂಬ ಅಭಿಪ್ರಾಯವಿದೆ.

ನೇಮಕಾತಿ ಪ್ರಕ್ರಿಯೆ ಹೇಗೆ?
ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ನಿರುದ್ಯೋಗ ಸಮಸ್ಯೆಗೆ ಕೊಂಚ ಪರಿಹಾರ ಒದಗಿಸಿದಂತಾಗುತ್ತದೆ. ಇಲಾಖೆಗಳ ಮುಖ್ಯಸ್ಥರು ಸಚಿ ವಾಲಯದ ಆಡಳಿತ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಹುದ್ದೆಗಳನ್ನು ತುಂಬಬೇಕು. ಇಲಾಖೆಗಳಿಂದ ಬರುವ ಪ್ರಸ್ತಾವನೆ ಗಳನ್ನು ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳ ಸೃಜನೆ ಮತ್ತು ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡುತ್ತದೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಇತರ ನೇಮ ಕಾತಿ ಪ್ರಾಧಿಕಾರಿಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ಕೇಂದ್ರದಿಂದ ನೇಮಕ
ಕೇಂದ್ರ ಸರಕಾರ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಮಂದಿಯನ್ನು ನೇಮಿಸಿಕೊಳ್ಳಲಿದೆ ಎಂದು ಕೇಂದ್ರ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್‌ ಇತ್ತೀಚೆಗೆ ಸಂಸತ್‌ನಲ್ಲಿ ಹೇಳಿದ್ದಾರೆ. 2-3 ವರ್ಷಗಳ ಹಿಂದೆ ರದ್ದು ಮಾಡಲಾದ ಹುದ್ದೆಗಳನ್ನು ಅಗತ್ಯಕ್ಕೆ ತಕ್ಕಂತೆ ಮತ್ತೆ ಸೃಷ್ಟಿಸಬಹುದು. ದೇಶದಲ್ಲಿ ಐಎಎಸ್‌ ಅಧಿಕಾರಿಗಳ ಮಟ್ಟದಲ್ಲಿ 1, 472 ಮತ್ತು ಐಪಿಎಸ್‌ ಮಟ್ಟದಲ್ಲಿ 864 ಹುದ್ದೆಗಳು ತೆರವಾಗಿವೆ ಎಂದಿದ್ದಾರೆ.

ಗ್ರೂಪ್‌ ಎ- 23, 584 (ಗೆಜೆಟೆಡ್‌)
ಗ್ರೂಪ್‌ ಬಿ- 26,282 (ಗೆಜೆಟೆಡ್‌)
ಗ್ರೂಪ್‌ ಬಿ- 92,525 (ನಾನ್‌- ಗೆಜೆಟೆಡ್‌)
ಗ್ರೂಪ್‌ ಸಿ- 8.36 ಲಕ್ಷ (ನಾನ್‌-ಗೆಜೆಟೆಡ್‌)

ರಕ್ಷಣ ಇಲಾಖೆಯಲ್ಲಿ
ಗ್ರೂಪ್‌ ಬಿ- 39,366 (ನಾನ್‌-ಗೆಜೆಟೆಡ್‌)
ಗ್ರೂಪ್‌ ಸಿ- 2.14 ಲಕ್ಷ (ನಾನ್‌-ಗೆಜೆಟೆಡ್‌)

ರೈಲ್ವೆ ಇಲಾಖೆ
ಗ್ರೂಪ್‌ ಸಿ- 2.91 ಲಕ್ಷ (ನಾನ್‌-ಗೆಜೆಟೆಡ್‌)
ಕೇಂದ್ರ ಗೃಹ ಸಚಿವಾಲಯ
ಗ್ರೂಪ್‌ ಸಿ- 1.21 ಲಕ್ಷ (ನಾನ್‌-ಗೆಜೆಟೆಡ್‌)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next