Advertisement

ಚಿತ್ರದುರ್ಗ: ಪುನೀತ್ ರಾಜಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ

01:15 PM May 03, 2022 | Team Udayavani |

ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚಿತ್ರದುರ್ಗ ಮುರುಘಾ ಮಠದಿಂದ ಮರಣೋತ್ತರವಾಗಿ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ದಿ.ಪುನೀತ್ ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪುರಸ್ಕಾರ ಸ್ವೀಕರಿಸಿದರು.

ಬಸವಶ್ರೀ ಪ್ರಶಸ್ತಿ ಐದು ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದೆ. ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಟ ಪುನೀತ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಇಡೀ ಕುಟುಂಬಕ್ಕೆ ಮಧ್ಯ ಕರ್ನಾಟಕದಿಂದ ಗೌರವಿಸುವ ಕೆಲಸ ಮಾಡಲಗಿದೆ ಎಂದರು.

ರಾಜಕುಮಾರ್ ಮುದ್ದಿನ ಮಗ ಪುನೀತ್. ಬೆಳ್ಳಿ ತೆರೆಯಲ್ಲಿ ನಟಿಸಿದ ಮಹಾನ್ ಪ್ರತಿಭಾವಂತ. ಅಭಿನಯ-ಅಭಿವ್ಯಕ್ತಿ-ಹಾಡುಗಾರಿಕೆಯಲ್ಲಿ ಅವರು ಪುನೀತ. ತಂದೆಯ ಸ್ಪೂರ್ತಿ ಇಟ್ಟುಕೊಂಡು ಆಕಾಶದೆತ್ತರಕ್ಕೆ ಬೆಳೆದವರು, ಇಂತಹ ಪ್ರತಿಭಾವಂತರನ್ನು ಪಡೆದ ಕನ್ನಡನಾಡು ಮಾನ್ಯ, ನಾವೆಲ್ಲರೂ ಧನ್ಯ ಎಂದರು.

Advertisement

ಇದನ್ನೂ ಓದಿ:ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಚಿವರ ಗೈರು: ಸ್ಥಳೀಯರ ಆಕ್ರೋಶ

ಸಾಹಿತಿ ಡಾ.ರಾಜಪ್ಪ ದಳವಾಯಿ ಮಾತನಾಡಿ, ಪುನೀತ್ ಅವರ ವಿಚಾರದಲ್ಲಿ ಈ ನಾಡು ಎಂದೂ ಅಭಿಮಾನ ಶೂನ್ಯ ಅಲ್ಲ ಎಂಬುದನ್ನು ತೋರಿಸಿದೆ. 25 ಲಕ್ಷಕ್ಕೂ ಹೆಚ್ಚು ಜನ ಅವರ ಸಾವಿನಿಂದ ದುಃಖಿತರಾಗಿದ್ದಾರೆ. ಕರ್ನಾಟಕದ ಮಠ ಪರಂಪರೆಯಲ್ಲಿ ಮುರುಘಾ ಮಠ ಎಷ್ಟು ಮುಖ್ಯವೋ, ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಟುಂಬ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಚಲನಚಿತ್ರ ನಿರ್ಮಾಪಕ ಚಿನ್ನೇಗೌಡ, ಸಾಹಿತಿ ರಾಜಪ್ಪ ದಳವಾಯಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಕೆ.ಎಸ್.ನವೀನ್, ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಕೆ‌.ಪರಶುರಾಮ್, ಜಿಪಂ ಸಿಇಒ ಡಾ.ನಂದಿನಿದೇವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next