Advertisement

65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ

01:11 AM Jun 27, 2020 | Sriram |

ಹೊಸದಿಲ್ಲಿ: ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆ ನಿಯಮ ಗಳಿಗೆ ತಿದ್ದುಪಡಿ ತರಲಾಗಿದ್ದು, 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತ ದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಕೇಂದ್ರ ಕಾನೂನು ಸಚಿ ವಾಲಯ ಜೂ.19ರಂದು ಹೊಸ ಸುತ್ತೋಲೆ ಹೊರಡಿಸಿದೆ.

Advertisement

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ 65 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮೂಲಕ ಮತದಾನಕ್ಕೆ ಅವ ಕಾಶ ಕಲ್ಪಿಸ ಲಾಗಿದೆ. ಅಲ್ಲದೆ ಕೋವಿಡ್‌ ಸೋಂಕು ಪೀಡಿತರು ಮತ್ತು ಶಂಕಿತ ಲಕ್ಷಣ ಗಳುಳ್ಳವರಿಗೆ ಅಂಚೆ ಮತದಾನಕ್ಕೆ ಅನುಮತಿ ನೀಡಲಾಗಿದೆ.

ಕಳೆದ ಅಕ್ಟೋಬರ್‌ ನಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತ ದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್‌ ಬಿಕ್ಕಟ್ಟು ಬಳಿಕ ದೇಶದಲ್ಲಿ ಬಿಹಾರ ದಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next