Advertisement

ರಾಖಿ ಕಳುಹಿಸಬೇಕಾ? ಆನ್‌ಲೈನ್‌ ಪೋಸ್ಟ್‌ ಸಂಪರ್ಕಿಸಿ

01:26 PM Jul 30, 2022 | Team Udayavani |

ಬೆಂಗಳೂರು: ಕೋವಿಡ್‌ ನಂತರವೂ ಆನ್‌ಲೈನ್‌ ರಾಖಿ ಪೋಸ್ಟ್‌ನ ಬೇಡಿಕೆ ಮುಂದುವರಿದಿದ್ದು, ಈ ಸಲ ಸುಮಾರು 5,000 ರಾಖೀಗಳನ್ನು ಪೋಸ್ಟ್‌ ಮೂಲಕ ಕಳುಹಿಸುವ ನಿರೀಕ್ಷೆ ಇದೆ.

Advertisement

ಸಹೋದರ-ಸಹೋದರಿ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಆ.11 ರಂದು ಇಡೀ ದೇಶಾದ್ಯಂತ ಆಚರಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಈಗಾಗಲೇ ಆರಂಭವಾಗಿರುವ ರಾಖೀ ಪೋಸ್ಟ್‌ ಆ.6ರವರೆಗೆ ಆನ್‌ ಲೈನ್‌ ಮೂಲಕ ರಾಖೀ ಮತ್ತು ಉಡುಗೊರೆ ಕಾರ್ಡ್‌  (ಗ್ರೀಟಿಂಗ್‌ ಕಾರ್ಡ್‌) ಅನ್ನು ಸಹೋದರರಿಗೆ ಕಳುಹಿಸಬಹುದಾಗಿದೆ. ಇದಕ್ಕಾಗಿ ಕರ್ನಾಟಕ ಅಂಚೆ

ಇಲಾಖೆಯು www.karnatakapost.gov.in  ರಾಖಿ ಪೋಸ್ಟ್ ಎಂಬ ವೆಬ್‌ಸೈಟ್‌ ಪ್ರಾರಂಭಿಸಿದೆ. ರಾಜ್ಯದೊಳಗಿನ ಸಹೋದರಿಯರು ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ದೇಶದ ಯಾವುದೇ ಪ್ರದೇಶದಲ್ಲಿರುವ ಸಹೋದರನಿಗೆ ತ್ವರಿತ ಅಂಚೆ(ಸ್ಟೀಡ್‌ ಪೋಸ್ಟ್‌) ಮೂಲಕ ರಾಖಿಯನ್ನು ಸುಲಭವಾಗಿ ಕಳುಹಿಸಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ನಮ್ಮ ದೇಶದ ಗಡಿ ಕಾಯುವ ಸೇನಾ ಯೋಧರಿಗೂ ರಾಖೀ ಮತ್ತು ಗ್ರೀಟಿಂಗ್‌ ಕಾರ್ಡ್‌ ತಲುಪಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಕೊರೊನಾ ಸಮಯದಲ್ಲಿ ಆರಂಭವಾದ ಈ ಯೋಜನೆಯು ಜನರಿಗೆ ತುಂಬಾ ಉಪಯುಕ್ತವಾಗಿದ್ದು, ಅನೇಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ 2,000 ರಾಖೀ ಮತ್ತು ಗ್ರೀಟಿಂಗ್‌ ಕಾರ್ಡ್‌ಗಳನ್ನು ದೇಶಾದ್ಯಂತ ಇರುವ ಸಹೋದರರಿಗೆ ತಲುಪಿಸಲಾಗಿತ್ತು. ಆದರೆ ಈ ಬಾರಿ ಹೆಚ್ಚು ಸಹೋದರಿಯರು ಈಗಾಗಲೇ ಆರ್ಡಾರ್‌ ಮಾಡಲು ಪ್ರಾರಂಭಿಸಿದ್ದು, ಸುಮಾರು 5,000 ರಾಖಿಗಳನ್ನು ತಲುಪಿಸುವ ನಿರೀಕ್ಷೆ ಇದೆ ಎಂದು ಅಂಚೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ರಾಖಿ ಕಳುಹಿಸುವುದು ಹೇಗೆ?:

Advertisement

ಗೂಗಲ್‌ನಲ್ಲಿ  www.karnatakapost.gov.in ಎಂಬ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ, ಸಾರ್ವಜನಿಕ ಸೇವೆಗಳ ಎಂಬ ವಿಭಾಗದಲ್ಲಿ ರಕ್ಷಾ ಬಂಧನ/ರಾಖೀ ಪೋಸ್ಟ್‌ ಎಂದಿರುತ್ತದೆ. ಅದರ ಮೇಲೆ ಟ್ಯಾಪ್‌ ಮಾಡದರೆ, ರಾಖಿ ಪೋಸ್ಟ್‌ ಪೇಜ್‌ ತೆರೆಯುತ್ತದೆ. ಅಲ್ಲಿ ಕಳುಹಿಸುವ ಸಹೋದರಿ ಮತ್ತು ಸ್ವೀಕರಿಸುವ ಸಹೋದರನ ಸಂಪೂರ್ಣ ಅಂಚೆ ವಿವರವನ್ನು ನೀಡಿ, ಅಲ್ಲಿರುವ ಹತ್ತಾರು ರಾಖೀಗಳಲ್ಲಿ ನಿಮಗಿಷ್ಟವಾದ ಡಿಸೈನ್‌ ರಾಖಿಯನ್ನು ಮತ್ತು ಚಂದದ ಸಂದೇಶವುಳ್ಳ ಗ್ರೀಟಿಂಗ್‌ ಕಾರ್ಡ್‌ಗಳನ್ನು ಆಯ್ಕೆ ಮಾಡಿದ ನಂತರ ನೆಟ್‌ ಬ್ಯಾಂಕಿಂಗ್‌, ಗೂಗಲ್‌ಪೇ, ಭೀಮ್‌ ಆ್ಯಪ್‌, ಫೋನ್‌ ಪೇ ಇತರೆ ನೆಟ್‌ ಪೇಮೆಂಟ್‌ ವಿಧಾನದಲ್ಲಿ ಶುಲ್ಕ 120 ರೂ. ಪಾವತಿಸಿ, ಆ.6ರೊಳಗೆ ಕಳುಹಿಸಿದಾಗ ಮಾತ್ರ ರಾಖಿ ಹಬ್ಬಕ್ಕೆ ಸರಿಯಾಗಿ ತಮ್ಮ ರಾಖೀ ಮತ್ತು ಸಂದೇಶ ಸಹೋದರನಿಗೆ ತಲುಪುತ್ತದೆ. ಇದರಲ್ಲಿ ಯೋಧರಿಗಾಗಿಯೇ ಪ್ರತ್ಯೇಕವಾದ ವಿಶೇಷ ರಾಖಿಗಳು ಮತ್ತು ಬರಹಗಳ ಗ್ರೀಟಿಂಗ್‌ ಕಾರ್ಡ್‌ಗಳನ್ನು ಕಳುಹಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next