Advertisement

15ನೇ ದಿನಕ್ಕೆ ಕಾಲಿಟ್ಟ ಅಂಚೆ ನೌಕರರ ಮುಷ್ಕರ

02:41 PM Jun 06, 2018 | Team Udayavani |

ನಂಜನಗೂಡು: ಇಲ್ಲಿನ ಉಪ ವಿಭಾಗದ ಅಂಚೆ ಕಚೇರಿ ನೌಕರರು ಜಾಥಾ ನಡೆಸುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಿದರು. ನಂಜನಗೂಡಿನ ಅಂಚೆ ಕಚೇರಿ ಆವರಣದಲ್ಲಿ ಉಪ ವಿಭಾಗದ ತಾಲೂಕಿನ 500ಕ್ಕೂ ಹೆಚ್ಚು  ಗ್ರಾಮೀಣ ಅಂಚೆ ನೌಕರರು ಜಮಾಯಿಸಿ ಕೆಲ ಸಮಯ ಎಂದಿನಂತೆ ಧರಣಿ ನಡೆಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡಿದರು.

Advertisement

ಕೇಂದ್ರದ ಹಣಕಾಸು ನೀತಿ ಬದಲಾಗಬೇಕು. ಕಮಲೇಶ ಚಂದ್ರ ಸಮಿತಿ ವರದಿ ಜಾರಿಗೊಳಿಸುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.  ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಶಾಸಕ ಹರ್ಷವರ್ಧನ್‌ ಮಾತನಾಡಿ,

ನಿಮ್ಮ ಅಹವಾಲನ್ನು ಸಂಸದ ಪ್ರತಾಪ ಸಿಂಹರ ಮುಖಾಂತರ ಕೇಂದ್ರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿ 14 ದಿನಗಳಾದರೂ ಪ್ರತಿಭಟನೆಯತ್ತ ಯಾರೊಬ್ಬರೂ ಮುಖ ಮಾಡುತ್ತಿಲ್ಲ. ಅಂಚೆ ನೌಕರರ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸದ ಸಂಸದ ಪ್ರತಾಪ ಸಿಂಹರ ವಿರುದ್ಧ  ಹರ್ಷವರ್ಧನ್‌ ಅಸಮಾಧಾನ ವ್ಯಕ್ತಪಡಿಸಿದರು. 

ಇಂದೇ ಮೈಸೂರಿಗೆ ತೆರಳಿ ಸಂಸದ ಪ್ರತಾಪ ಸಿಂಹ ಅವರಿಗೆ ಮನವಿ ಪತ್ರ ನೀಡಿ ಅವರೊಂದಿಗೆ ಮಾತನಾಡುತ್ತೇನೆ. ಮೈಸೂರು ನಗರದ ಯಾದವಗಿರಿ ಅಂಚೆ ಕಾರ್ಯಾಲಯದ ಮುಂದೆ 15 ದಿನಗಳಿಂದಲೂ ಅನಿರ್ದಿಷ್ಟಾವದಿ ಮುಷ್ಕರ ನಡೆಯುತ್ತಿದ್ದರೂ ಗಮನ ಹರಿಸದಿರುವುದು ತುಂಬಾ ಬೇಜವಾಬ್ದಾರಿ ಎಂದು ಪ್ರತಿಭಟನಾಕಾರರನ್ನು ಸಂತೈಸಿದರು.  

ದಿನಕ್ಕೆ 18 ತಾಸು ಕೆಲಸ: ಇದೇ ಸಂದರ್ಭದಲ್ಲಿ ಗ್ರಾಮೀಣ ನೌಕರರ ಸಂಘದ ಪದಾಧಿಕಾರಿಗಳು ನಡೆಸಿದ ಸಭೆಯಲ್ಲಿ ಸಂಘದ ಅಧ್ಯಕ್ಷ ಶೇಖಣ್ಣ, ಮಲ್ಲಿಕಾರ್ಜುನ, ಮಾದೇಶ್‌ ಮಾತನಾಡಿ, ದಿನಕ್ಕೆ 18 ಗಂಟೆ ಕೆಲಸ ಮಾಡಿಸಿಕೊಳ್ಳುವ ಅಂಚೆ ಇಲಾಖೆ, ನಮಗೆ ನೀಡುತ್ತಿರುವ ಕೂಲಿ ಕೇವಲ 3 ತಾಸಿನದ್ದು ಮಾತ್ರ. ಈ ಸಂಬಳದಲ್ಲಿ ನಮ್ಮ ಜೀವನ ಹೇಗೆ ನಡೆಯಬೇಕು. ಅದಕ್ಕಾಗಿಯೇ ಕಳೆದ 15 ದಿನಗಳಿಂದ  ಹೋರಾಟ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇಸುವವರೆಗೂ ಮುಷ್ಕರ ವಾಪಸ್‌ ಪಡಯುವುದಿಲ್ಲ ಎಂದು ಹೇಳಿದರು.

Advertisement

12ರಿಂದ ಕಾಯಂ ನೌಕರರು ಭಾಗಿ: ಜೂ.12ರೊಳಗೆ ನೌಕರರ ಬೇಡಿಕೆ ಈಡೇರಿಸದಿದ್ದಲ್ಲಿ ಇಲಾಖೆಯ ಕಾಯಂ ನೌಕಕರು ನಮ್ಮ ಮುಷ್ಕರವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಉಪ ಭಾಗದ ಅಂಚೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ್‌, ಉಷಾ,  ಮಂಜು ಘೋಷಿಸಿದರು. ಪ್ರತಿಭಟನೆ ಮತ್ತು ಮೆರೆವಣಿಗೆಯಲ್ಲಿ ಸಂಘದ ಅಧ್ಯಕ್ಷ ಶೇಖಣ್ಣ, ಮಹೇಶ್‌, ಮಲ್ಲಿಕಾರ್ಜುನ, ಶಿವಣ್ಣ, ಚಿನ್ನಸ್ವಾಮಿ ಸೇರಿದಂತೆ ನೂರಾರು ಮಹಿಳಾ ನೌಕರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next