ದೇಶದ ಎಲ್ಲ ನಾಗರಿಕರೂ ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಸರಳವಾಗಿಸಲು ಕೇಂದ್ರ ಹಾಗೂ ಅಂಚೆ ಇಲಾಖೆ ಒಪ್ಪಂದವನ್ನು ಮಾಡಿಕೊಂಡಿವೆ. ಇದರಿಂದ, ಆನ್‌ಲೈನ್ ಬಗ್ಗೆ ತಿಳಿವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.
ಏನಿದು ಸೌಕರ್ಯ? :
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಹಾಗೂ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಂದದ ಪ್ರಕಾರ, ಆಧಾರ್ ಕಾರ್ಡ್ ದಾರರ ಮೊಬೈಲ್ ಸಂಖ್ಯೆ ಅಪ್‌ಡೇಟ್‌ನ ಜವಾಬ್ದಾರಿಯನ್ನು ಅಂಚೆ ಯಣ್ಣನಿಗೆ ನೀಡಲಾಗಿದೆ. ಮನೆಮನೆಗೂ ಭೇಟಿ ಕೊಡುವ ಪೋಸ್ಟ್ ಮ್ಯಾನ್‌ಗಳು, ಈವರೆಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರದ ಮೊಬೈಲ್ ಸಂಖ್ಯೆಗಳ ಜೋಡಣೆ ಕಾರ್ಯ ನೆರವೇರಿಸ ಲಿದ್ದಾರೆ.
1.46 ಲಕ್ಷ ಸಿಬಂದಿ :
ದೇಶದ ಸುಮಾರು 650 ಅಂಚೆ ಕಚೇರಿಗಳ ಸುಮಾರು ಪೋಸ್ಟ್ ಮ್ಯಾನ್‌ಗಳು, ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಗ್ರಾಮೀ ಣ್ ಢಾಕ್ ಸೇವಕ್ (ಜಿಡಿಎಸ್) ಸೇರಿದಂತೆ ಸುಮಾರು 1.46 ಲಕ್ಷ ಅಂಚೆ ಇಲಾಖೆ ಸಿಬಂದಿಯ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದೆ.
ಅಂಚೆ ಕಚೇರಿಗಳಲ್ಲೂ ಎನ್ರೋಲ್ಮೆಂಟ್ :
ನಗರ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳಲ್ಲಿ ಆಧಾರ್‌ಗೆ ಫೋನ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆ ಈಗಾಗಲೇ ಶುರುವಾಗಿದೆ. ಇನ್ನು ಮುಂದೆ ಆಧಾರ್ ಅರ್ಜಿಗಳನ್ನು ಅಲ್ಲಿಯೇ ಪಡೆಯುವ ವ್ಯವಸ್ಥೆ ಕೂಡ ಜಾರಿಗೊಳ್ಳಲಿದೆ. ಸದ್ಯದಲ್ಲಿಯೇ ಮಕ್ಕಳ ಆಧಾರ್ ಕಾರ್ಡ್ ಗಳಿಗೂ (ಬಾಲ ಆಧಾರ್) ಅರ್ಜಿಯನ್ನು ಸ್ವೀಕರಿಸುವ ಸೌಲಭ್ಯ ಕೂಡ ಆರಂಭವಾಗಲಿದೆ.