Advertisement
ಕರ್ನಾಟಕ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ರೂಪಿಸಲು ಹಾಗೂ ಕೈಗಾರಿಕೆಗಳಿಗೆ ವಿಶೇಷ ರಿಯಯಿತಿ ಮತ್ತು ಉತ್ತೇಜನ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಪುಟದ ಉಪಸಮಿತಿ ರಚನೆಗೊಂಡಿದೆ. ಕೈಗಾರಿಕೆ,ಕಂದಾಯ ಹಾಗೂ ಕಾನೂನು ಸಚಿವರು ಈ ಸಮಿತಿಯಲ್ಲಿರುತ್ತಾರೆ. ನೂತನ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ, ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ರೂಪುಗೊಳ್ಳುವ ನಿರೀಕ್ಷೆಗಳಿವೆ. ಈ ಅವಕಾಶಗಳ ಬಳಕೆಗೆ ರಾಜ್ಯದಲ್ಲಿ ಅತಿ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ಮಂಗಳೂರು ಮಹಾನಗರ ಈಗಿಂದಲೇ ಸಿದ್ಧಗೊಳ್ಳಬೇಕಾಗಿದೆ. ಇಲ್ಲಿನ ವಿವಿಧ ಪ್ರದೇಶಗಳನ್ನು ಅಲ್ಲಿರುವ ಅವಕಾಶಗಳಿಗೆ ಅನುಗುಣವಾಗಿ ಮತ್ತು ಅಲ್ಲಿ ಕೇಂದ್ರೀಕೃತಗೊಂಡಿರುವ ಕೈಗಾರಿಕಾ ಚಟುವಟಿಕೆಗಳ ನೆಲೆಯಲ್ಲಿ ವಿಭಿನ್ನ ಕೈಗಾರಿಕಾ ಕ್ಲಸ್ಟರ್‌ಗಳಾಗಿ ರೂಪಿಸಿ ಅಭಿವೃದ್ಧಿಪಡಿಸುವ ಕಾರ್ಯ ಯೋಜನೆಯೊಂದು ಸಿದ್ಧªಗೊಂಡರೆ ನಗರ ಕೈಗಾರಿಕಾ ಪ್ರದೇಶವಾಗಿ ವ್ಯವಸ್ಥಿತ ರೀತಿಯಲ್ಲಿ ಯೋಜನಾಬದ್ಧವಾಗಿ ರೂಪುಗೊಳ್ಳಲು ಪೂರಕವಾಗಬಹುದು. ಬೆಂಗಳೂರು ಹಾಗೂ ದೇಶದ ಇತರ ಕೆಲವು ನಗರಗಳಲ್ಲಿ ಈ ರೀತಿಯ ವ್ಯವಸ್ಥಿತ ಕೈಗಾರಿಕಾ ಕ್ಲಸ್ಟರ್‌ಗಳು ಸ್ಥಾಪನೆಯಾಗಿ ನಿರ್ದಿಷ್ಟ ಉತ್ಪನ್ನಗಳಿಗೆ ಗುರುತಿಸಿಕೊಂಡಿರುವ ಮಾದರಿಗಳಿವೆ.
ದ. ಕ.ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್, ಜವುಳಿ ( ಆ್ಯಪೆರಾಲ್) ಪಾರ್ಕ್, ಆಹಾರ ಸಂಸ್ಕರಣಾ ಉದ್ಯಮ ಪಾರ್ಕ್ ,ಐಟಿ ಪಾರ್ಕ್, ಕೊಕೊನಟ್ ಪಾರ್ಕ್ , ಜಾಷಧ ತಯಾರಿ ಪಾರ್ಕ್, ಆಟೋಮೊಬೈಲ್ ಪಾರ್ಕ್ ಮುಂತಾದ ಯೋಜನೆಗಳು ಬಹಳಷ್ಟು ಸಮಯದಿಂದ ಪ್ರಸ್ತಾವನೆಯಲ್ಲಿವೆ. ಇವುಗಳನ್ನು ಕಾರ್ಯರೂಪಕ್ಕೆ ತಂದು ಕ್ಲಸ್ಟರ್ ರೂಪದಲ್ಲಿ ವಿಂಗಡಿಸಿ ಅನುಷ್ಠಾನಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬಹುದಾಗಿದೆ.
Related Articles
Advertisement
ಪಿಲಿಕುಳ ಈಗಾಗಲೇ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಾಮಂಜೂರು, ಪಿಲಿಕುಳ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ಇದರ ಪಕ್ಕದಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ನದಿಯನ್ನು ಒಂದು ಜಲಯಾನ ತಾಣವಾಗಿ ರೂಪಿಸುವ ಪ್ರಸ್ತಾವನೆ ಈ ಹಿಂದೆ ಕೇಳಿಬಂದಿತ್ತು. ಪಿಲಿಕುಳ ಪರಿಸರದಲ್ಲಿ ಈಗಾಗಲೇ ಸುಸಜ್ಜಿತ ಗಾಲ್ಫ್ಕೋರ್ಟ್ ಕೂಡ ಇದೆ. ವಾಟರ್ ಸ್ಪೋಟ್ಸ್ ತಾಣವಿದೆ. ಬೋಟಿಂಗ್ ವ್ಯವಸ್ಥೆ ಇದೆ. ಇಲ್ಲಿನ ಅವಕಾಶಗಳನ್ನು ಬಳಸಿಕೊಂಡು ಇಲ್ಲಿ ಫಿಲಂಸಿಟಿ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಬಹುದಾಗಿದೆ.
ಮಂಗಳೂರಿನಲ್ಲಿ ಸರ್ವಋತು ಬಂದರು, ರೈಲು ಮಾರ್ಗ ಹಾಗೂ ವಿಮಾನ ನಿಲ್ದಾಣಗಳಿರುವುದರಿಂದ ಉದ್ಯಮಗಳ ಸ್ಥಾಪನೆಗೆ ಅನುಕೂಲಕರವಾಗಿದೆ.
ಕರ್ನಾಟಕದಲ್ಲಿ ಈ ಹಿಂದಿನ ಸರಕಾರ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಚೀನಾ ಮಾದರಿಯಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಕೊಪ್ಪಳದಲ್ಲಿ ಟಾಯ್ಸ ಕ್ಲಸ್ಟರ್ ಹಾಗೂ ಬಳ್ಳಾರಿಯಲ್ಲಿ ಜವಳಿ ಕ್ಲಸ್ಟರ್‌ಗಳು ಈಗಾಗಲೇ ಆರಂಭಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್ಸ್, ಮೈಸೂರಿನಲ್ಲಿ ಪ್ರಿಂಟೆಡ್ ಸಕೂಟ್ ಬೋರ್ಡ್ಸ್, ಹಾಸನದಲ್ಲಿ ಟೈಲ್ಸ್, ಕಲಬುರಗಿಯಲ್ಲಿ ಸೋಲಾರ್ ಪ್ಯಾನಲ್ಸ್, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟ್ಸ್, ಬೀದರ್‌ನಲ್ಲಿ ಕೃಷಿ ಉಪಕರಣಗಳು ಹಾಗೂ ತುಮಕೂರಿನಲ್ಲಿ ಸೋರ್ಟ್ಸ್ ಗೂಡ್ಸ್ ಕ್ಲಸ್ಟರ್‌ಗಳು ಸ್ಥಾಪಿಸಲು ಸರಕಾರ ಕಾರ್ಯಯೋಜನೆ ರೂಪಿಸಿತ್ತು . ಒಟ್ಟು 9 ಉತ್ಪನ್ನ ಪ್ರವರ್ಗಗಳಲ್ಲಿ ಪ್ರಸ್ತುತ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಸಿದ್ಧಗೊಂಡಿತ್ತು. ಇದರಿಂದ 9 ಲಕ್ಷ ಮಂದಿಗೆ ಉದ್ಯೋಗ ಲಭಿಸಲಿದೆ ನಿರೀಕ್ಷಿಸಲಾಗಿತ್ತು.
ಮಂಗಳೂರು ನಗರದಲ್ಲೂ ಇಲ್ಲಿನ ಅವಕಾಶಗಳನ್ನು ಪರಿಗಣಿಸಿಕೊಂಡು ಉತ್ಪನ್ನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ ಅದನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿ ಉತ್ಪನ್ನ ಕೇಂದ್ರವಾಗಿ ಗುರುತಿಸುವಂತೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಒಂದಷ್ಟು ಚಿಂತನೆ ನಡೆಸಬಹುದಾಗಿದೆ.
- ಕೇಶವ ಕುಂದರ್