Advertisement

ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ಕೋವಿಡ್ ಪಾಸಿಟಿವಿಟಿ ರೇಟ್: ಇಂದು 53 ಮಂದಿ ಬಲಿ

08:12 PM Feb 04, 2022 | Team Udayavani |

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶುಕ್ರವಾರ ಒಂದಂಕಿಗೆ (9.17%) ಇಳಿದಿದ್ದು, ಜನವರಿ 8 ರ ಬಳಿಕ ದಾಖಲಾದ ಅತೀ ಕಡಿಮೆ ರೇಟ್ ಇದಾಗಿದೆ. ಜನವರಿ 20 ರಂದು ಗರಿಷ್ಠ 30,540 ಪ್ರಕರಣಗಳಿಂದ ನಗರದಲ್ಲಿ 80% ರಷ್ಟು ಕಡಿಮೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ 51 ಸಾವಿರ ಸಕ್ರಿಯ ಕೇಸ್‌ಗಳು ಇವೆ.

Advertisement

ಶುಕ್ರವಾರ 14,950 ಪ್ರಕರಣಗಳು ದೃಢಪಟ್ಟಿವೆ. 53 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಪೈಕಿ ಬೆಂಗಳೂರಿನ 15 ಮಂದಿ ಸೇರಿದ್ದಾರೆ.

ಬೆಂಗಳೂರಿನಲ್ಲಿ 6,039 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಪಾಸಿಟಿವಿಟಿ ರೇಟ್ 10.93% ಇದ್ದು, ಇಂದು 40,599 ಮಂದಿ ಗುಣಮುಖರಾಗಿದ್ದಾರೆ. ಇಂದು 1,36,777 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ 1,23,098 ಸಕ್ರಿಯ ಪ್ರಕರಣಗಳಿವೆ .

Advertisement

Udayavani is now on Telegram. Click here to join our channel and stay updated with the latest news.

Next