Advertisement

ಸಕಾರಾತ್ಮಕ ಚಿಂತನೆಯೇ ದೇಶದ ಬಹುದೊಡ್ಡ ಆಸ್ತಿ

07:10 AM Feb 05, 2019 | Team Udayavani |

ಚಿಕ್ಕಬಳ್ಳಾಪುರ: ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯ ಕೂಡ ಜಾತಿ, ಧರ್ಮ ಮತ್ತು ಸಂಸ್ಕೃತಿಯನ್ನು ಮೀರಿ ಸಾರ್ವತ್ರಿಕವಾಗಿ ದೇಶಭಕ್ತಿ ಬೆಳೆಸಿ ಕೊಳ್ಳಬೇಕು. ಸಕಾರಾತ್ಮಕ ಮನೋಭಾವ ದಿಂದ ದೇಶದ ಎಲ್ಲಾ ಜನರನ್ನು ಪ್ರೀತಿಯಿಂದ ಕಾಣ ಬೇಕಿದೆ ಎಂದು ಚಿಂತಕ ಇ.ಕೆ.ರಾಜನ್‌ ಹೇಳಿದರು.

Advertisement

ತಾಲೂಕಿನ ಪೆರೇಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಪರಿವರ್ತನಾ- 2019ರ 8ನೇ ವರ್ಷದ ಶಾಲಾ ವಾರ್ಷಿ ಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ಸೇನೆಗೆ ಸೇರಿ ದೇಶ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕೆಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ಕರ್ತವ್ಯ ಪ್ರಜ್ಞೆ ಇರಲಿ: ದೇಶದ ಭವಿಷ್ಯ ಇಂದು ಕಲಿಯುತ್ತಿರುವ ಮಕ್ಕಳ ಮೇಲೆ ಆಧಾರಿತವಾಗಿದೆ. ಮಕ್ಕಳು ಪ್ರತಿಭಾ ವಂತರಾಗುವುದರ ಜೊತೆಗೆ ದೇಶದ ಬಗ್ಗೆ ಕಾಳಜಿ ಮತ್ತು ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಚಿಕ್ಕಬಳ್ಳಾಪುರವು ವಿಜ್ಞಾನ ಮತ್ತು ಕೃಷಿಗೆ ಹೆಸರುವಾಸಿ ಯಾಗಿರುವ ಜಿಲ್ಲೆ. ಸರ್‌ ಎಂ.ವಿಶ್ವೇಶ್ವರಯ್ಯ ಮತ್ತು ಸಿ.ಎನ್‌.ಆರ್‌.ರಾವ್‌ ಅವರಂತಹ ಭಾರತ ರತ್ನರನ್ನು ಕೊಟ್ಟಿದೆ. ಅವರ ದಾರಿಯನ್ನು ವಿದ್ಯಾ ರ್ಥಿಗಳು ಅನುಸರಿಸಬೇಕು. ಸಾವಿ ರಾರು ಜನ ಹೋರಾಟಗಾರರು ಹುತಾ ತ್ಮರಿಂದ ಈ ದೇಶ ನಿರ್ಮಾಣ ವಾಗಿದೆ ಎಂದು ತಿಳಿಯಬೇಕು ಎಂದರು.

ಪರಿವರ್ತನೆಯ ವಕ್ತಾರರಾಗಲಿ: ರಿಲಯನ್ಸ್‌ ಇಂಡಿಯಾ ಸಂಸ್ಥೆಯ ನಿವೃತ್ತ ಹಿರಿಯ ಅಧಿಕಾರಿ ಅನಂತ ರವಿ ಮಾತನಾಡಿ, ಬಹುಮಾನ ತೆಗೆದು ಕೊಳ್ಳುವ ಮಕ್ಕಳು ಬಹುಮಾನದ ಹಿಂದಿನ ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯನ್ನು ಮುಂದುವರಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸಲು ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ತಮ್ಮ ತಾಯಿ ನೆನಪಿನಲ್ಲಿ ಶಾಂತಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡುವ ಮಕ್ಕಳು ಈ ಭಾಗದ ಮತ್ತು ನಾಡಿನ ಪರಿವರ್ತನೆಯ ವಕ್ತಾರರಾಗಬೇಕೆಂಬುದು ಈ ಶಾಲೆಯ ಕನಸಾಗಿದೆ ಎಂದರು.

ಶಾಂತಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕೆ ಮಾರ್ಗದರ್ಶಕ ಡಾ.ಚೌದರಿ ಪ್ರಸಾದ್‌ ಮಾತನಾಡಿದರು.ಅಧ್ಯಕ್ಷತೆಯನ್ನು ಜಿಪಂ ಸದಸ್ಯರಾದ ಪಿ.ಎನ್‌.ಕೇಶವರೆಡ್ಡಿ ವಹಿಸಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ನೆನೆಪಿನ ಕಾಣಿಕೆ, ಪ್ರಮಾಣಪತ್ರದೊಂದಿಗೆ ಬಹು ಮಾನ ವಿತರಿಸಿದರು. ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್‌ ಹಾಗೂ ಶಾಲೆಯ ಶಿಕ್ಷಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next