Advertisement

ಭಾರತ್ ಜೋಡೋದಿಂದ ನಿರ್ಮಾಣವಾದ ಸಕಾರಾತ್ಮಕ ಶಕ್ತಿ ಕೊಚ್ಚಿ ಹೋಗಿದೆ: ರಾವುತ್

06:13 PM Nov 20, 2022 | Team Udayavani |

ಮುಂಬಯಿ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಿಂದ ನಿರ್ಮಾಣವಾದ ಸಕಾರಾತ್ಮಕ ಶಕ್ತಿಯನ್ನು ರಾಹುಲ್ ಗಾಂಧಿಯವರು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ಟೀಕೆಯಿಂದ ಮುಚ್ಚಿ ಹಾಕಿದ್ದಾರೆ ಎಂದು ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

Advertisement

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ‘ರೋಖ್‌ಥೋಕ್’ನಲ್ಲಿ, ರಾಜ್ಯಸಭಾ ಸದಸ್ಯ ರಾವುತ್, ಜನರ ಭಾವನಾತ್ಮಕ ಸ್ವರವನ್ನು ಸ್ಪರ್ಶಿಸುವ ವಿಷಯಗಳನ್ನು ಗಾಂಧಿ ಏಕೆ ತೆಗೆದುಕೊಳ್ಳುತ್ತಿದ್ದಾರೆ. ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಆಹಾರವಾಗುವ ಅವಕಾಶ ಏಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದಿರುವ ರಾವುತ್, ”ನಾನು ಮೂರು ತಿಂಗಳು ಜೈಲಿನಲ್ಲಿ ಕಳೆದಿದ್ದೇನೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿ ಸ್ಮಾರಕವಿದೆ. ಒಬ್ಬ ಸಾಮಾನ್ಯ ಕೈದಿಯಾಗಿ ಒಂದು ದಿನವೂ ಜೈಲಿನಲ್ಲಿ ಕಳೆಯುವುದು ಕಷ್ಟ.ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದರು ಮತ್ತು ಅಪಾರ ಕಷ್ಟಗಳನ್ನು ಎದುರಿಸಿದರು. ಬ್ರಿಟಿಷರು ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಅವರನ್ನು ಬಂಧಿಸಲಿಲ್ಲ. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಸಶಸ್ತ್ರ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದವರು, ಅದಕ್ಕಾಗಿಯೇ ಅವರನ್ನು ಅಂಡಮಾನ್‌ಗೆ ಕರೆದೊಯ್ದು ಶಿಕ್ಷೆ ವಿಧಿಸಲಾಯಿತು ”ಎಂದು ಮರಾಠಿ ದೈನಿಕ ಸಾಮ್ನಾ ಕಾರ್ಯನಿರ್ವಾಹಕ ಸಂಪಾದಕ ರಾವುತ್ ಹೇಳಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಲು ಬ್ರಿಟಿಷರ ವಿರುದ್ಧ ತಮ್ಮ ಹಿಂದಿನ ಹಿಂಸಾತ್ಮಕ ವಿಧಾನಕ್ಕಾಗಿ ಸಾವರ್ಕರ್ ವಿಷಾದಿಸಿದರೆ, ಅದನ್ನು ಶರಣಾಗತಿ ಎಂದು ಅರ್ಥೈಸಬಾರದು ಆದರೆ ಅದು ತಂತ್ರ ಎಂದು ರಾವುತ್ ಹೇಳಿದ್ದಾರೆ.

“ಇಂದು, ಅನೇಕ ನಾಯಕರು ಜಾರಿ ನಿರ್ದೇಶನಾಲಯದ ಭಯದಿಂದ ಕೇಂದ್ರ ಸರ್ಕಾರಕ್ಕೆ ಶರಣಾಗಿದ್ದಾರೆ, ಪಕ್ಷಗಳನ್ನು ಬದಲಾಯಿಸುತ್ತಾರೆ ಮತ್ತು ನಿಷ್ಠೆಯನ್ನು ತ್ಯಜಿಸುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ 10 ವರ್ಷಕ್ಕೂ ಹೆಚ್ಚು ಕಾಲ ನರಳಿದರು, ”ಎಂದು ಅವರು ಹೇಳಿದ್ದಾರೆ.

Advertisement

ಸಾವರ್ಕರ್ ಅವರ ಟೀಕೆ ಭಾರತ್ ಜೋಡೋ ಯಾತ್ರೆಯ ಅಜೆಂಡಾ ಅಲ್ಲ. ಸಾವರ್ಕರ್ ವಿರುದ್ಧ ಮಾತನಾಡುವ ಮೂಲಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಧನಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ರಾವತ್ ಹೇಳಿದ್ದಾರೆ.

ಎಂಟು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದರೂ ಸಾವರ್ಕರ್‌ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿಲ್ಲ ಎಂದು ಅವರು ಹೇಳಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ನೆಹರು ಅವರನ್ನು ನಿಂದಿಸುವುದನ್ನು ನಿಲ್ಲಿಸುವುದಿಲ್ಲ, ಮತ್ತು ರಾಹುಲ್ ಗಾಂಧಿ ಕೂಡ ಸಾವರ್ಕರ್ ಅವರೊಂದಿಗೆ ಅದೇ ರೀತಿ ಮಾಡುತ್ತಾರೆ. ಇದು ದೇಶದ ಮುಂದಿರುವ ಅಜೆಂಡಾ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತವನ್ನು ಹೇಗೆ ಒಗ್ಗೂಡಿಸಬಹುದು ಎಂದು ಚಿಂತಿಸಬೇಕು ರಾವುತ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next