Advertisement

ಉಳ್ಳಾಲ ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ; ವಿವಾದ

04:07 PM Sep 28, 2022 | Team Udayavani |

ಉಳ್ಳಾಲ: ಪೋಷಣ್ ಅಭಿಯಾನದ ತಾಲೂಕು ಮಟ್ಟದ ಕಾರ್ಯಕ್ರಮದ ಒಂದು ಭಾಗವಾಗಿ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮದ ಬ್ಯಾನರ್ ನಲ್ಲಿ ಹಿಂದೂ ಗರ್ಭಿಣಿಯ ಭಾವ ಚಿತ್ರ ಹಾಕಿ ಶಾಸಕ ಯು.ಟಿ. ಖಾದರ್ ಅವರ ಭಾವಚಿತ್ರದೊಂದಿಗೆ ಸ್ವಾಗತ ಕೋರುವ ಬ್ಯಾನರ್ ವಿವಾದಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬ್ಯಾನರ್ ತೆರವುಗೊಳಿಸಿ, ಶಾಸಕ ಯು‌ಟಿ. ಖಾದರ್ ವಿರುದ್ದ ದಿಕ್ಕಾರ ಹಾಕಿದ ಘಟನೆ ಕೊಲ್ಯ ನಾರಾಯಣ ಗುರು ಸಭಾಂಗಣದಲ್ಲಿ ಬುಧವಾರ ನಡೆದಿದೆ.

Advertisement

ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಭಾಗವಾಗಿ ಉಳ್ಳಾಲ ತಾಲೂಕಿನ ಗರ್ಭಿಣಿ‌ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಹಿಂದೂ‌ ಸಂಘಟನೆಯಲ್ಲಿ ಸಕ್ರೀಯರಾಗಿರುವ ಮುಖಂಡರೊಬ್ಬರ ಸಂಬಂಧಿ  ಮಹಿಳೆಯ ಹಳೆಯ ಫೋಟೋ ಅನುಮತಿ ಇಲ್ಲದೆ ಯು.ಟಿ. ಖಾದರ್ ಬೆಂಬಲಿಗರು ಫ್ಲೆಕ್ಸ್ ಮಾಡಿ ಕೆಳಗೆ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸುವ ಯು.ಟಿ.ಖಾದರ್ ಚಿತ್ರವನ್ಬು ಹಾಕಿ ಸಭಾಂಗಣದ ಹೊರಗೆ ಅಳವಡಿಸಿದ್ದರು.

ಕಾರ್ಯಕ್ರಮ ಆರಂಭಕ್ಕೆ ಮೊದಲೇ ಯು.ಟಿ. ಖಾದರ್ ಬೆಂಬಲಿಗರ ಫ್ಲೆಕ್ಸ್ ನಲ್ಲಿ ಹಿಂದೂ ಮಹಿಳೆಯ ಫೋಟೋ ಅಳವಡಿಸಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆ ಮಹಿಳೆಯ ಸಂಬಂಧಿಕರು‌ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿದ್ದು ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಿದರು.

ನವರಾತ್ರಿ ಸಂದರ್ಭದಲ್ಲಿ ಸೀಮಂತ ಕ್ರಮ ಸರಿಯಲ್ಲ
ನವರಾತ್ರಿ ಹಿಂದೂಗಳಿಗೆ ಅತ್ಯಂತ ಮಹತ್ವದ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಬಾಳೆ ಎಲೆ ಹಾಕಿ ಸೀಮಂತ ಮಾಡಿರುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಘಟ‌ನೆ ಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ,ಅ‌ನುಮತಿ‌ ಇಲ್ಲದೆ ಹಿಂದೂ ಮಹಿಳೆಯ ಫೋಟೋ ಬಳಕೆ ಮಾಡಿರುವುದು ಅಪರಾಧ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next