Advertisement

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ದಿಢೀರ್ ಸೆಕ್ಸ್ ವಿಡಿಯೋ ಪ್ರಸಾರ!

06:20 PM Apr 15, 2017 | Sharanya Alva |

ನವದೆಹಲಿ: ದೆಹಲಿಯ ಕನ್ನಾಟ್ ಪ್ರದೇಶದ ಜನನಿಬಿಡ ರಾಜೀವ್ ಚೌಕ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರು ಅಚ್ಚರಿ, ಶಾಕ್ ಗೆ ಒಳಗಾದ ಘಟನೆ ನಡೆದಿತ್ತು. ಅದಕ್ಕೆ ಕಾರಣ ಮೆಟ್ರೋ ನಿಲ್ದಾಣದಲ್ಲಿದ್ದ ಬೃಹತ್ ಎಇಡಿ ಪರದೆ ಮೇಲೆ ನೀಲಿ ಚಿತ್ರ ಪ್ರಸಾರವಾಗಿರುವುದು!

Advertisement

ಮೆಟ್ರೋ ನಿಲ್ದಾಣದಲ್ಲಿನ ಎಲ್ಇಡಿ ಪರದೆಗಳು ಜಾಹೀರಾತು ಪ್ರಸಾರಕ್ಕೆ ಬಳಕೆಯಾಗುತ್ತಿದೆ. ಆದರೆ ಏಪ್ರಿಲ್ 9ರಂದು ಸ್ಕ್ರೀನ್ ಮೇಲೆ ದಿಢೀರ್ ಆಗಿ ಸೆಕ್ಸ್ ವಿಡಿಯೋ ಪ್ರಸಾರವಾಗಿರುವುದು ಪ್ರಯಾಣಿಕರ ಮುಜುಗರಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಧಾವಂತದಲ್ಲಿದ್ದ ಪ್ರಯಾಣಿಕರು ತಮ್ಮ ಪಾಡಿಗೆ ತಾವು ನಡೆದು ಹೋಗಿದ್ದರು, ಏತನ್ಮಧ್ಯೆ ಕೆಲವು ಪ್ರಯಾಣಿಕರು ಒಂದು ನಿಮಿಷಗಳ ಕಾಲ ಪ್ರಸಾರವಾದ ನೀಲಿ ಚಿತ್ರವನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆ ಹಿಡಿದಿದ್ದರು ಎಂದು ವರದಿ ವಿವರಿಸಿದೆ.

ಹೀಗೆ ಸೆರೆಹಿಡಿದ ಪ್ರಯಾಣಿಕರು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ಇದು ಹಲವು ಬಾರಿ ಶೇರ್ ಆಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಶನ್ ವಕ್ತಾರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next