Advertisement

ಜನಸಂಖ್ಯೆ ಸ್ಫೋಟ ದೇಶಕ್ಕೆ ಹೊರೆ; ವೈದ್ಯಾಧಿಕಾರಿ ಬಿ.ಜಿ

06:10 PM Jul 20, 2022 | Team Udayavani |

ಅಥಣಿ: ಜನಸಂಖ್ಯೆ ಸ್ಫೋಟದಿಂದಾಗಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಅಥಣಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಮತ್ತು ವೈದ್ಯಾಧಿಕಾರಿ ಬಿ.ಜಿ. ಕಾಗೆ ಹೇಳಿದರು.

Advertisement

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಜನಸಂಖ್ಯೆ ಹೆಚ್ಚಾಗುವುದರಿಂದ ಆಗುವ ಅನಾಹುತಗಳ ಕುರಿತು ಜಾಗೃತಿ
ಮೂಡಿಸಲು ಆಯೋಜಿಸಲಾಗುತ್ತದೆ.

ಜನಸಂಖ್ಯೆ ಹೆಚ್ಚಳ ದೇಶದ ಅಭಿವೃದ್ದಿಗೆ ಮಾರಕವಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರೂ ಮುಂದಾಗಬೇಕು. ಭಾರತದ ಜನಸಂಖ್ಯೆಯನ್ನು ನಿಯಂತ್ರಿಸದೇ ಹೋದರೆ ಮುಂದೆ ಭಾರತ ಚೀನಾ ದೇಶವನ್ನು ಮೀರಿಸಲಿದೆ ಎಂದು ಎಚ್ಚರಿಸಿದರು.

ಎನ್‌.ಬಿ.ಕೋಟಿ ಉಪನ್ಯಾಸ ನೀಡಿ, ವಿಶ್ವದ ಜನಸಂಖ್ಯೆ 2050 ರಲ್ಲಿ 9.7 ಬಿಲಿಯನ್‌ ದಾಟಲಿದ್ದು, ಭಾರತದ ಜನಸಂಖ್ಯೆ 2050 ರಲ್ಲಿ 163 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದರು. ಪ್ರಾಚಾರ್ಯ ಡಿ.ವೈ. ಕಾಂಬಳೆ, ತಾ.ಪಂ.ವ್ಯವಸ್ಥಾಪಕ ಉದಯಗೌಡ ಪಾಟೀಲ, ಆರೋಗ್ಯ ಶಿಕ್ಷಣಾಧಿ ಕಾರಿ ಎ.ಬಿ.ಗುಳೆಧರ, ತಮ್ಮಣ್ಣಾ ಕುರುಂದವಾಡ, ವಿಲಾಸ ಕಾಂಬಳೆ, ವಿದ್ಯಾ ರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next