ಪಶ್ಚಿಮ ಬಂಗಾಳ: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತನ್ನ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.
ಜೂನ್ 19,1962 ರಲ್ಲಿ ದೆಹಲಿ ಹುಟ್ಟಿದ ಅವರು 1986ರಲ್ಲಿ ನಟನಾ ಲೋಕಕ್ಕೆ ಕಾಲಿಟ್ಟರು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ ಸುಮಾರು 11 ಭಾಷೆಯಲ್ಲಿ 300 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಆಶಿಶ್ ನಟಿಸಿದ್ದಾರೆ.
1995ರಲ್ಲಿ ಬಂದ ʼ ದ್ರೋಹ್ಕಾಲ್ʼ ಸಿನಿಮಾದಲ್ಲಿನ ಅವರ ಪೋಷಕ ನಟನೆಗಾಗಿ ಆಶಿಶ್ ಅವರಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.
ಬಹುತೇಕ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ತನ್ನ 60ನೇ ವಯಸ್ಸಿನಲ್ಲಿ ವರಿಸಿದ್ದಾರೆ.
Related Articles
ಆತ್ಮೀಯರ ಸಮ್ಮುಖದಲ್ಲಿ ಕೋಲ್ಕತ್ತಾದಲ್ಲಿ ಈ ಮದುವೆ ಸಮಾರಂಭ ನೆರವೇರಿದ್ದು, ವಧು – ವರರ ಸ್ನೇಹಿತರು ಪಾಲ್ಗೊಂಡಿಗೊಂಡಿದ್ದಾರೆ.
ನಟ ಈ ಹಿಂದೆ ಆಶಿಶ್ ಗಾಯಕಿ ಮತ್ತು ರಂಗಭೂಮಿ ಕಲಾವಿದ ರಾಜೋಶಿ ವಿದ್ಯಾರ್ಥಿ ಅವರನ್ನು ವಿವಾಹವಾಗಿದ್ದರು.