Advertisement

ವೈಚಾರಿಕ ಭಾವನೆಗಳನ್ನು ಅಳವಡಿಸಿಕೊಂಡು ಬದುಕಿದ ತೇಜಸ್ವಿ : ಲೇಖಕ ಪೂರ್ಣೆಶ್ ಮತ್ತಾವರ ಅಭಿಮತ

07:10 PM Apr 05, 2022 | Team Udayavani |

ಕೊಟ್ಟಿಗೆಹಾರ: ವೈಚಾರಿಕ ಭಾವನೆಗಳನ್ನು ಅಳವಡಿಸಿಕೊಂಡು ಬದುಕಿದ ತೇಜಸ್ವಿ ಅವರ ಬದುಕು ಮತ್ತು ಬರಹ ಸ್ಪೂರ್ತಿದಾಯಕವಾದದ್ದು ಎಂದು ಲೇಖಕ ಪೂರ್ಣೆಶ್ ಮತ್ತಾವರ ಹೇಳಿದರು.

Advertisement

ಕೆ.ಪಿ ಪೂರ್ಣಚಂದ್ರೆ ತೇಜಸ್ವಿ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ತೇಜಸ್ವಿ ಬದುಕು ಬರಹ ವಿಚಾರ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಬಹುಮುಖ ವ್ಯಕ್ತಿತ್ವದ ತೇಜಸ್ವಿ ಪರಿಸರ, ಕೃಷಿ, ಛಾಯಾಗ್ರಹಣ, ಚಿತ್ರಕಲೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿಕೊಂಡವರು. ಮಿಲೆನಿಯಮ್ ಸರಣಿಯ ಮೂಲಕ ವಿಜ್ಞಾನ ಬರಹಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಬರೆದವರು ತೇಜಸ್ವಿ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ. ರಮೇಶ್ ಮಾತನಾಡಿ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳ ಸಾಕಾರಕ್ಕಾಗಿ ತೇಜಸ್ವಿ ಪ್ರತಿಷ್ಠಾನ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು ಮುಂದಿನ ದಿನಗಳಲ್ಲಿ ಮಕ್ಕಳು ಮತ್ತು ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಕವಿಗೋಷ್ಠಿಯಲ್ಲಿ ಪ್ರತಿಸ್ಪಂದನೆ ನೀಡಿ ಮಾತನಾಡಿದ ಡಾ.ಎಚ್.ಎಸ್,ಸತ್ಯನಾರಾಯಣ, ಅನುಭವಿಸಿ ವಿಚಾರದ ಪ್ರಕ್ರಿಯೆಗಳಿಗೆ ಒಡ್ಡಿಕೊಂಡು ವಿಜ್ಞಾನ ಬರಹಗಳನ್ನು ಬರೆದವರು ತೇಜಸ್ವಿ. ಆ ಕಾರಣಕ್ಕಾಗಿಯೇ ತೇಜಸ್ವಿ ಅವರ ವಿಜ್ಞಾನ ಬರಹಗಳು ಓದುಗರಿಗೆ ಆಪ್ತವಾಗಿವೆ. ಪರಿಸರ, ಪಕ್ಷಿ, ಜೀವ ಸಂಕುಲದ ಬಗ್ಗೆ ಬೆರಗನ್ನು ಮೂಡಿಸಲು ತೇಜಸ್ವಿ ಅವರ ಕೃತಿಗಳನ್ನು ಯುವಪೀಳಿಗೆ ಹಾಗೂ ಮಕ್ಕಳು ಓದುವ ಅಗತ್ಯವಿದೆ ಎಂದರು.

Advertisement

ಈ ಸಂದರ್ಭದಲ್ಲಿ ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ, ಬಾಪು ದಿನೇಶ್, ಕವಿಗಳಾದ ಎಂ.ಎಸ್,ನಾಗರಾಜ್, ಅಲ್ತಾಪ್ ಬಿಳುಗುಳ, ವಿಶ್ವ ಹಾರ್ಲಗದ್ದೆ, ಹಾಬಾ ನಾಗೇಶ್, ದರ್ಶನ್ ಚಿಕ್ಕಮಗಳೂರು, ಶ್ರೀನಿವಾಸ್, ಸಮಪತ್ ಕುಮಾರ್, ಪ್ರದೀಪ್ ಸಾಲಿಯಾರ್, ಅತ್ತಿಗೆರೆಯ ಸರ್ಕಾರಿ ಫ್ರೌಡಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಸಂಜಯಗೌಡ, ಶಿಕ್ಷಕರಾದ ಕಿರಣ್,ಯೋಗೇಶ್, ಸೌಮ್ಯ, ಪ್ರತಿಷ್ಟಾನದ ಸಂಯೋಜಕರಾದ ಆಕರ್ಷ್, ನಂದನ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಪ್ರತಿಷ್ಠಾನದ ಸಿಬ್ಬಂದಿ ಸತೀಶ್, ಸಂಗೀತಾ ಇದ್ದರು.

ಗಮನ ಸೆಳೆದ ಕವನ ವಾಚನ : 

ತೇಜಸ್ವಿ ಅವರ ಕುರಿತ ಸ್ವರಚಿತ ಕವನ ವಾಚನ ಗಮನ ಸೆಳೆಯಿತು. ಕವಿ ಶ್ರೀನಿವಾಸ್ ಅವರು, ‘ನೀವಿಲ್ಲದೇ ಖಗಸಂಕುಲ ಮಂಕಾಗಿದೆ, ವೆಸ್ಟಾ ಸ್ಕೂಟರ್, ಜೀಪು ಬಣ್ಣಗೆಟ್ಟಿವೆ, ಕ್ಯಾಮರಾಗಳ ಕಂಗಳಿಗೆ ಪೊರೆ ಮೂಡಿದೆ, ಕೀಲಿಮಣೆ ತುಂಬೆಲ್ಲಾವ ಧೂಳಿನ ಚಿತ್ತಾರವೆದ್ದಿದೆ’ ಎಂದು ತೇಜಸ್ವಿ ಅವರನ್ನು ನೆನಪಿಸಿಕೊಂಡರೆ, ದರ್ಶನ್ ಚಿಕ್ಕಮಗಳೂರು ಅವರು ‘ಕಾಫಿ ತೋಟವೇ ವಿಶ್ವ ವಿದ್ಯಾ ನಿಲಯ, ಸ್ಕೂಟರ್ ರಿಪೇರಿ, ಪೋಟೊಗ್ರಪಿಗಳೇ ಪಾಠ ಪ್ರವಚನ, ಹಾರುವ ಹಲ್ಲಿಯ ಅನ್ವೇಷಣೆಯೆ ಕಮ್ಮಟ, ಸಮ್ಮೇಳನ ಎಂದರು. ಸಂಪತ್ ಕುಮಾರ್ ಎಂ ಅವರು, ‘ತೇಜಸ್ವಿ ಇಂದಿಗೂ ಜೀವಂತ ಮರಗಿಡ ಪಶು ಪಕ್ಷಿಗಳಲ್ಲಿ ನಮ್ಮೊಳಗಿನ ಅಧಮ್ಯ ಚೇತನಗಳಲ್ಲಿ ಎಂದರು. ಪ್ರದೀಪ್ ಸಾಲಿಯಾರ್ , ಹಾಬಾ ನಾಗೇಶ್, ಎಂ,ಎಸ್ ನಾಗರಾಜ್, ವಿಶ್ವ ಹಾರ್ಲಗದ್ದೆ, ಅಲ್ತಾಪ್ ಬಿಳುಗುಳ ಅವರ ಕವಿತೆಗಳು ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next