Advertisement

ಉಪಾಹಾರದಲ್ಲಿ ಹುಳು; ಪೌರಕಾರ್ಮಿಕರ ಆಕ್ರೋಶ

06:32 AM Jun 20, 2020 | Team Udayavani |

ಧಾರವಾಡ: ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲೂ ಅವಳಿನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಶುಕ್ರವಾರ ಬೆಳಗ್ಗೆ ನೀಡಿದ ಉಪಾಹಾರದ ಅವಲಕ್ಕಿಯಲ್ಲಿ ಹುಳು ಪತ್ತೆಯಾಗಿದೆ. ನಗರದ ವಾರ್ಡ್‌ ನಂ.19ರ ಪೌರಕಾರ್ಮಿಕರಿಗೆ ನೀಡಿದ ಅವಲಕ್ಕಿಯಲ್ಲಿ ಹುಳು ಪತ್ತೆಯಾಗಿದ್ದು, ಉಪಾಹಾರ ಪೂರೈಸಿದ ಗುತ್ತಿಗೆದಾರರ ವಿರುದ್ಧ ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

Advertisement

ಪೌರಕಾರ್ಮಿಕರಿಗೆ ಪೂರೈಸುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ. ಕೂಡಲೇ ಎಚ್ಚೆತ್ತು ಉತ್ತಮ ಗುಣಮಟ್ಟದ ಆಹಾರ ಪೂರೈಸುವಂತೆ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘ ಆಗ್ರಹಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದಲೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದು, ಜೂ. 6 ಹಾಗೂ ಜೂ. 12ರಂದು ನೀಡಿದ ಆಹಾರದಲ್ಲಿ ಹುಳು ಪತ್ತೆ ಆಗಿರುವ ಬಗ್ಗೆ ದೂರು ಬಂದಿತ್ತು. ಈಗ ಮತ್ತೆ ಘಟನೆ ಮರುಕಳಿಸಿದೆ. ಈ ರೀತಿಯ ಘಟನೆ ಪದೇ ಪದೇ ಮರುಕಳಿಸುವಂತಾಗಿದೆ. ಹೀಗಾಗಿ ಸಂಬಂಧಪಟ್ಟ  ಗುತ್ತಿಗೆದಾರ/ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next