ಜೈಪುರ: ಫ್ಯಾಂಟಸಿ ಗೇಮ್ ಗಳಲ್ಲಿ ಹಣ ಹಾಕಿ ಕೋಟಿ ಗೆಲ್ಲುವ ಕನಸು ಕಾಣುವ ಲಕ್ಷಾಂತರ ಮಂದಿ ಇದ್ದಾರೆ. ಇದು ಸ್ಕಿಲ್ ಹಾಗೂ ಅದೃಷ್ಟದ ಆಟ. ಇಲ್ಲಿ ರಾತ್ರೋ ರಾತ್ರಿ ಕೋಟಿ ಗೆದ್ದವರು ಸಿಗುತ್ತಾರೆ. ಅದೇ ರೀತಿ ಕೋಟಿ ಗೆಲ್ಲುವ ತವಕದಲ್ಲಿ ಲಕ್ಷ ರೂ.ಗಳನ್ನು ಕಳೆದುಕೊಳ್ಳುವವರು ಇರುತ್ತಾರೆ.
ಹರಿಯಾಣ ಗುರಗಾಂವ್ ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರೂಪವಾಸ್ ತೆಹಸಿಲ್‌ನ ಮಾದಾಪುರ ಗ್ರಾಮದ ಖೇಮ್ ಸಿಂಗ್ ಎಂಬ ವ್ಯಕ್ತಿ ಈಗ ಕೋಟಿ ಗೆದ್ದಿದ್ದಾರೆ.
ತಾನಾಯಿತು ತನ್ನ ಕೆಲಸವಾಯಿತೆಂದು ಬಡತನದಲ್ಲೂ ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದ ಖೇಮ್ ಸಿಂಗ್ ಅವರಿಗೆ ಕ್ರಿಕೆಟ್ ಆಟದ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ. ಗ್ರಾಮದಲ್ಲಿ ಇತರ ಯುವಕರು ಫ್ಯಾಂಟಸಿ ಗೇಮ್ ಆಡುತ್ತಿರುವುದನ್ನು ನೋಡಿದ್ದಾರೆ. 49 ರೂ. ಕಟ್ಟಿ ಕೋಟಿ ಗೆಲ್ಲಬಹುದು ಎನ್ನುವುದನ್ನು ಕೇಳಿದ್ದಾರೆ. ಇದೇ ಮಾತನ್ನು ಕೇಳಿ ತಾನೂ ಕೂಡ ಇದನ್ನು ಆಡಬೇಕೆಂದು ಡ್ರೀಮ್ 11 ಫ್ಯಾಂಟಸಿ ಆಟದಲ್ಲಿ ಮೊದಲಿಗೆ 49 ರೂ.ವನ್ನು ಕಟ್ಟಿದ್ದಾರೆ. ಮೊದಲಿಗೆ ಅವರು ಕಟ್ಟಿದ ತಂಡಕ್ಕೆ ಯಾವ ಹಣವೂ ಬಂದಿಲ್ಲ.
ಇದನ್ನೂ ಓದಿ: ಕನ್ನಡದ ಕೂಸಿನ ಪ್ರತಿಭೆಗೆ PM Modi ಮೆಚ್ಚುಗೆ
Related Articles
ಇದರಿಂದ ಸುಮ್ಮನಾಗಿದ್ದ ಅವರು, ಎರಡನೇ ಪ್ರಯತ್ನ ನೋಡುವವೆಂದು ಹೈದರಾಬಾದ್ – ಚೆನ್ನೈ ನಡುವಿನ ಪಂದ್ಯಕ್ಕೆ 49 ರೂ. ಕಟ್ಟಿದ್ದಾರೆ ಮಾಡಿದ್ದಾರೆ. ಅದೃಷ್ಟವೆಂದರೆ ಅವರು ಕಟ್ಟಿದ ತಂಡ ಲೀಡರ್ ಬೋರ್ಡ್ ನಲ್ಲಿ 1 ಸ್ಥಾನ ಪಡೆದಿದೆ. ಅವರು ರಾತ್ರೋ ರಾತ್ರಿ 2 ಕೋಟಿ ರೂ.ವನ್ನು ಗೆದ್ದಿದ್ದಾರೆ.
ಈ ಅನಿರೀಕ್ಷಿತ ಆನಂದಕ್ಕೆ ಅವರ ಕುಟುಂಬ ತುಂಬಾ ಸಂತೋಷವಾಗಿದೆ. ಗ್ರಾಮಸ್ಥರು ಖೇಮ್ ಸಿಂಗ್ ರನ್ನು ಸನ್ಮಾನ ಮಾಡಿ, ಪೇಟ ತೊಡಿಸಿದ್ದಾರೆ.
ಸದ್ಯ ಅವರ ಖಾತೆಗೆ 68 ಲಕ್ಷ ರೂ. ಬಂದಿದ್ದು, ಉಳಿದ ಹಣ ಹಣ ಪ್ರಕ್ರಿಯೆಯಲ್ಲಿದೆ. ಹಣವನ್ನು ಕುಟುಂಬದವರೊಂದಿಗೆ ಚರ್ಚಿಸಿ ಹೇಗೆ ಉಪಯೋಗ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.