Advertisement

ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ: ಅಪರೂಪದ ಕಾಯಿಲೆಗೆ ತುತ್ತಾದ ನಟಿ

04:38 PM Dec 03, 2022 | Team Udayavani |

ಹೈದರಾಬಾದ್: ಇತ್ತೀಚೆಗೆ ಸಮಂತಾ ತಮ್ಮ ಕಾಯಿಲೆಯ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದರು. ಈಗ ಈ ಸಾಲಿಗೆ ಮತ್ತೋರ್ವ ಖ್ಯಾತ ನಟಿ ಸೇರಿದ್ದಾರೆ.

Advertisement

ಟಾಲಿವುಡ್‌ ನಲ್ಲಿ 2006 ರಲ್ಲಿ ʼ ಮಾಯಾಜಲಂʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂನಂ ಕೌರ್ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

“ಕಳೆದ ಎರಡು ವರ್ಷಗಳಿಂದ “ಫೈಬ್ರೊಮ್ಯಾಲ್ಗಿಯ”( ನಿದ್ರಾಹೀನತೆ, ನೆನಪಿನ ಶಕ್ತಿ, ಮಾನಸಿಕ ಸಮಸ್ಯೆಗಳು ಮತ್ತು ತೀವ್ರವಾದ ಸ್ನಾಯು ನೋವುಗಳು) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಸದ್ಯ ನಾನು ಈ ಸಂಬಂಧ ಕೇರಳದಲ್ಲಿ ಆರ್ಯವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ” ಎಂದು ಅಭಿಮಾನಿಗಳೊಂದಿಗೆ ವಿಚಾರವನ್ನು ಹೇಳಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  ಅಭಿಮಾನಿಗಳು ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಶುಭ ಹಾರೈಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೂನಂ ಕೌರ್‌ ವಿವಾದಿತ ಪೋಸ್ಟ್‌ ಗಳಿಂದ ಸುದ್ದಿಯಾಗಿದ್ದರು. ʼಶೌರ್ಯಂʼ, ‘ವಿನಾಯಕುಡು’, ‘ಈನಾಡು’, ‘ಗಣೇಶ್ ‍& ಗಗನಂ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next