Advertisement

ಪಂಚ ರಾಜ್ಯ ಚುನಾವಣೆ: 110 ಕೋಟಿ ರೂ. ಅಕ್ರಮ ನಗದು ವಶ

11:03 AM Feb 01, 2017 | udayavani editorial |

ಹೊಸದಿಲ್ಲಿ : ವಿಧಾನ ಸಭಾ ಚುನಾವಣೆಗಳನ್ನು ಕಾಣುತ್ತಿರುವ ಐದು ರಾಜ್ಯಗಳಲ್ಲಿ ಈ ತನಕ ಅಕ್ರಮ ಸಾಗಣೆಯ100 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ನೇಮಿಸಿರುವ ವಿಚಕ್ಷಣ ದಳವು ತಿಳಿಸಿದೆ.

Advertisement

ಇದೇ ವೇಳೆ 32.03 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಹಾಗೂ 4,800 ಕೆಜಿ ಪ್ರಮಾಣದ, 21 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಕಣ್ಗಾವಲು ದಳ ಹೇಳಿದೆ. 

ಚುನಾವಣೆ ಘೋಷಣೆಯಾದಂದಿನಿಂದ ಈ ತನಕ ಉತ್ತರ ಪ್ರದೇಶದಲ್ಲಿ 90.98 ಕೋಟಿ ರೂ. ಮೌಲ್ಯದ ಗರಿಷ್ಠ  ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನು ಅನುಸರಿಸಿ ಪಂಜಾಬಿನಲ್ಲಿ 7.08 ಕೋಟಿ ರೂ., ಗೋವೆಯಲ್ಲಿ 1.27 ಕೋಟಿ ರೂ., ಉತ್ತರಾಖಂಡದಲ್ಲಿ  1.23 ಕೋಟಿ ರೂ. ಮತ್ತು ಮಣಿಪುರದಲ್ಲಿ 8.13 ಲಕ್ಷ ರೂ. ಅಕ್ರಮ ಸಾಗಣೆಯ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಚಕ್ಷಣ ದಳ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next