Advertisement
ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಗಳಿಗೆ, ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಮಂಗಳೂರು ದಕ್ಷಿಣ ಹಾಗೂ ಬಂಟ್ಸ್‌ಹಾಸ್ಟೆಲ್ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಬೇಕಾದ ಸಲಕರಣೆ ಪೂರೈಕೆ ಮಾಡುವ ಪ್ರಕ್ರಿಯೆ ನಡೆಯಿತು.
Related Articles
Advertisement
ಸಿಬಂದಿ ನಿಯೋಜನೆಎಲ್ಲ ಮತಗಟ್ಟೆಗಳಿಗೆ 5ರಿಂದ 9 ಸಿಬಂದಿ ಯನ್ನು ನೇಮಿಸಲಾಗಿದ್ದು, ಸಾವಿರಾರು ಸಿಬಂದಿ ಚುನಾ ವಣೆ ಕರ್ತವ್ಯಕ್ಕೆ ತೆರಳಿದ್ದಾರೆ. ಸೂಕ್ಷ್ಮ ಮತಗಟ್ಟೆ ಗಳಲ್ಲಿ ಸಿಆರ್‌ಪಿಎಫ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಮೊದಲ ಬಾರಿಗೆ ವಾಹನಕ್ಕೆ ಜಿಪಿಎಸ್
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಾಹನಗಳಿಗೆ ಜಿಪಿಎಸ್ ಸಿಸ್ಟಮ್ ಅಳವಡಿಸಿ ಇವಿಎಂ ಯಂತ್ರವನ್ನು ಕೊಂಡೊಯ್ಯಲಾಗಿದೆ. ಇದ ರಿಂದ ಆ ವಾಹನ ಯಾವ ದಾರಿಯಾಗಿ ಸಾಗುತ್ತದೆ ಎಂಬ ಮಾಹಿತಿ ಮಸ್ಟರಿಂಗ್ ಕೇಂದ್ರದ ಅಧಿಕಾರಿಗಳಿಗೆ ದೊರೆ ಯುವುದರಿಂದ ಚುನಾವಣೆ ಹೆಚ್ಚು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ವೆಬ್ ಕೆಮರಾ ಅಳವಡಿಕೆ
ಸುಸೂತ್ರ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಇವರು ತಮಗೆ ವಹಿಸಿರುವ ಮತಗಟ್ಟೆಗಳಿಗೆ ತೆರಳಿ ಪಾರದರ್ಶಕತೆಯನ್ನು ಪರಿಶೀಲಿಸುತ್ತಾರೆ. ಅಲ್ಲದೆ, ವೆಬ್ ಕೆಮರಾ, ವೀಡಿಯೋ ಕೆಮರಾಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ. 163 ವಾಹನ
ಮೂರೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಿಗೆ ಬಸ್, ಮಿನಿ ಬಸ್ ಸಹಿತ ಒಟ್ಟು 163ಕ್ಕೂ ಹೆಚ್ಚು ವಾಹನಗಳು ಅವಶ್ಯ ಸಲಕರಣೆ ಹಾಗೂ ಸಿಬಂದಿಯನ್ನು ಕೊಂಡೊಯ್ದವು. ಪ್ರತಿ ಮತಗಟ್ಟೆಗೆ ಮತಗಟ್ಟೆಯ ಸಂಖ್ಯೆಗನುಗುಣವಾಗಿ ಇವಿಎಂ ಯಂತ್ರ ಮತ್ತು ಸೆಕ್ಟರ್‌ಗಳಿಗೆ ಹೆಚ್ಚುವರಿ ಯಂತ್ರವನ್ನು ಕೊಂಡೊಯ್ಯಲಾಯಿತು. ಇವಿಎಂ ಯಂತ್ರ ಕೆಲಸ ನಿರ್ವಹಿಸದಿದ್ದಲ್ಲಿ ಬದಲಿ ವ್ಯವಸ್ಥೆಯಾಗಿ ಹೆಚ್ಚುವರಿ ಯಂತ್ರವನ್ನು ಕಳುಹಿಸಿಕೊಡಲಾಯಿತು. ವಿಕಲಚೇತನ ಮತದಾರರು, ವೃದ್ಧರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆಗಳಿಗೊಂದರಂತೆ ವೀಲ್‌ಚೇರ್‌ಗಳನ್ನು ಕೊಂಡೊಯ್ಯಲಾಯಿತು. ಅಲ್ಲದೆ, ಮಸ್ಟರಿಂಗ್ ನಡೆದ ಸಂಸ್ಥೆ ಗಳಲ್ಲಿ ಹೆಚ್ಚುವರಿ ಸಿಬಂದಿಯನ್ನು ಇರಿಸಿ ಕೊ ಳ್ಳಲಾಗಿದ್ದು, ಅಗತ್ಯ ಬಿದ್ದಲ್ಲಿ ಅವ ರನ್ನೂ ಮತಗಟ್ಟೆಗಳಿಗೆ ಗುರುವಾರ ಕಳುಹಿ ಸಲಾಗುತ್ತದೆ. ಪ್ರತಿ ವರ್ಷ ಸಿಬಂದಿ ಬೆಳಗ್ಗೆಯೇ ಮಸ್ಟರಿಂಗ್ ಕೇಂದ್ರ ದಿಂದ ನಿಯೋಜಿಸಿದ ಮತಗ ಟ್ಟೆಗಳಿಗೆ ತೆರಳಬೇಕಿತ್ತು. ಇದರಿಂದ ಮತ ಯಂತ್ರ ದೋಷ ಅಥವಾ ಇತರ ಸಮಸ್ಯೆ ಗಳಿದ್ದಲ್ಲಿ ಅದನ್ನು ಸರಿಪಡಿಸಲು ಸಮಯ ತಗಲುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನದವರೆಗೂ ಸಿಬಂದಿ ಮಸ್ಟ ರಿಂಗ್ ಕೇಂದ್ರದಲ್ಲಿದ್ದು, ಮತದಾನಕ್ಕೆ ಸಂಬಂಧಿ ಸಿದ ಎಲ್ಲವನ್ನು ಪರಿಶೀಲಿಸಿದ ಬಳಿಕವಷ್ಟೇ ಮತಗಟ್ಟೆಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಅಣುಕು ಮತದಾನ
ಚುನಾವಣೆ ದಿನವಾದ ಗುರುವಾರ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 6 ಗಂಟೆಗೆ ಅಣುಕು ಮತದಾನ ನಡೆಯಲಿದೆ. ಇವಿಎಂ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಈ ಅಣುಕು ಮತದಾನ ನಡೆಯಲಿದ್ದು, 6.45ರ ವೇಳೆಗೆ ಇವಿಎಂ ಯಂತ್ರವನ್ನು ಕ್ಲಿಯರ್ ಮಾಡಲಾಗುತ್ತದೆ. 7ರಿಂದ ಮತದಾನ ಆರಂಭವಾಗಲಿದೆ. ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಸಿಕೊಳ್ಳುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಆಗಮಿಸಿದ ಸಿಬಂದಿ, ಪೊಲೀಸರು, ಸಿಆರ್‌ಪಿಎಫ್ ಸಿಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಒಂದೆಡೆ ಕುಳಿತು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.