ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ಮುಹೂರ್ತ ನಿಗದಿಪಡಿಸಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರ್ಯಾಣ ಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಘೋಷಿಸಿದೆ.
ಹರ್ಯಾಣ ವಿಧಾನಸಭೆ 90 ಶಾಸಕ ಬಲ ಹೊಂದಿದ್ದು, ಮಹಾರಾಷ್ಟ್ರ ವಿಧಾನಸಭೆ 288 ಸದಸ್ಯ ಬಲ ಹೊಂದಿದ್ದು, ಎರಡು ರಾಜ್ಯಗಳು ಸೇರಿ ಒಟ್ಟು 378 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಹರ್ಯಾಣ ರಾಜ್ಯದಲ್ಲಿ ಒಟ್ಟು 1.82 ಕೋಟಿ ಮತದಾರರಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು 8.94 ಕೋಟಿ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಕಮಿಷನರ್ ಸುನೀಲ್ ಆರೋರಾ ವಿವರಿಸಿದರು.
2014ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹರ್ಯಾಣದಲ್ಲಿ ಬಿಜೆಪಿ 47 ಸ್ಥಾನ ಪಡೆದು ಅಧಿಕಾರಕ್ಕೆ ಏರಿತ್ತು.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 04
ನಾಮಪತ್ರ ಪರಿಶೀಲನೆ ಅಕ್ಟೋಬರ್ 05
ನಾಮಪತ್ರ ಹಿಂಪಡೆಯುವ ದಿನ ಅಕ್ಟೋಬರ್ 07
ಚುನಾವಣೆ ನಡೆಯುವ ದಿನಾಂಕ ಅಕ್ಟೋಬರ್ 21
ಫಲಿತಾಂಶ-ಅಕ್ಟೋಬರ್ 24