Advertisement

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ: ವೇಳಾಪಟ್ಟಿ ಪ್ರಕಟ

01:44 AM Nov 30, 2021 | Team Udayavani |

ಬೆಂಗಳೂರು: ಅವಧಿ ಮುಗಿದ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸೋಮವಾರ ವೇಳಾಪಟ್ಟಿ ಪ್ರಕಟಿಸಿದೆ.

Advertisement

ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆ ದಿನವಾಗಿದೆ. ಡಿ. 18 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಚುನಾವಣೆ ಸಂಬಂಧ ಡಿ.8ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ.

1,185 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು, 19 ಪುರಸಭೆಗಳು, 34 ಪಟ್ಟಣ ಪಂಚಾಯತ್ ,ವಿವಿಧ ಕಾರಣಗಳಿಂದ ತೆರವಾಗಿರುವ ನಗರಸಭೆಯ 5 ಸ್ಥಾನಗಳು, ಪುರ ಸಭೆಯ 3 ಮತ್ತು ಪಟ್ಟಣ ಪಂಚಾಯತ್ ನ 1 ವಾರ್ಡ್ ಗೆ ಚುನಾವಣೆ ನಡೆಯಲಿದೆ.

ಡಿಸೆಂಬರ್ 29 ರಂದು ಮರು ಮತದಾನವೂ ನಡೆಯಲಿದೆ. ಡಿಸೆಂಬರ್ 30 ಕ್ಕೆ ಮತ ಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next