ದೋಹಾ: ವಂಶಪಾರಂಪರ್ಯ ಆಡಳಿತ ವ್ಯವಸ್ಥೆಯಿರುವ ಕತಾರ್‌ನಲ್ಲಿ ಇದೇ ಮೊದಲ ಬಾರಿಗೆ ಮತದಾನ ನಡೆಸಲಾಗಿದೆ.
ಸರಕಾರಕ್ಕೆ ಸಲಹೆ ನೀಡಲು ಇರುವ ಸಲಹಾ ಸಮಿತಿಯ 45 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆ ನಡೆಸಲಾಗಿದೆ. 300 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶುರಾ ಕೌನ್ಸಿಲ್ ಎಂದು ಕರೆಯುವ ಸಲಹಾ ಸಮಿತಿಯು ಹೊಸ ಕಾನೂನುಗಳನ್ನು ರೂಪಿಸುವ, ಬಜೆಟ್‌ಗೆ ಒಪ್ಪಿಗೆ ನೀಡುವ, ಪ್ರಮುಖ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಹಾಗೂ ಕತಾರ್‌ನ ರಾಜ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿಯವರಿಗೆ ಸಲಹೆ ನೀಡುವ ಅಧಿ ಕಾರವನ್ನು ಹೊಂದಿದೆ.
ಇದನ್ನೂ ಓದಿ:ಗಾಂಧೀಜಿ ನೈತಿಕ ಭಾರತ ಕಟ್ಟುವ ಶಕ್ತಿ: ಬೊಮ್ಮಾಯಿ
ಇದರಲ್ಲಿ ಒಟ್ಟು 45 ಸದಸ್ಯರಿರುತ್ತಾರೆ. ಈ ಸಮಿತಿಗೆ ಭದ್ರತೆ, ರಕ್ಷಣೆ ಮತ್ತು ಅರ್ಥ ವ್ಯವಸ್ಥೆಗಳ ವಿಚಾರಗಳಲ್ಲಿ ಸರಕಾರಕ್ಕೆ ಸಲಹೆ ನೀಡುವ ಅಧಿಕಾರವಿಲ್ಲ. ಸಮಿತಿಗೆ ಈವರೆಗೆ ಸರಕಾರ ನಾಮನಿರ್ದೇಶನ ಮಾಡುತ್ತಿತ್ತು.