ನವದೆಹಲಿ: ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯುವ ಮೊದಲೇ ಚುನಾವಣಾ ಆಯೋಗ ಬರೋಬ್ಬರಿ 4,650 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಇದು ಈವರೆಗಿನ ಎಲ್ಲಾ ಲೋಕಸಭಾ ಚುನಾವಣೆಗಳಿಗಿಂತ ಅತ್ಯಧಿಕ ಮೊತ್ತವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಮೇಠಿಯಲ್ಲಿ ಮರ್ಯಾದೆ ಉಳಿಸಿಕೊಳ್ಳೋದು ಕಷ್ಟವಾಗಿದೆ: ರಾಹುಲ್ ಗೆ ಪ್ರಧಾನಿ ಚಾಟಿ
ಲೋಕ ಸಭಾ ಚುನಾವಣೆಗಳಲ್ಲಿನ ಇತಿಹಾಸದಲ್ಲಿಯೇ ಇದು ದಾಖಲೆ ಮೊತ್ತದ ನಗದು ವಶಪಡಿಸಿಕೊಂಡಂತಾಗಿರುವುದಾಗಿ ಆಯೋಗ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಿದೆ.
ಮಾರ್ಚ್ 1ರಿಂದ ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿ ದಿನ ನೂರು ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 3,475 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ 2024ರಲ್ಲಿ ಮೊದಲ ಹಂತದ ಚುನಾವಣೆಗೂ ಮುನ್ನವೇ 4,650 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ದಾಖಲೆಯ ಪ್ರಮಾಣದ್ದಾಗಿದೆ ಎಂದು ಆಯೋಗ ತಿಳಿಸಿದೆ.
2019ರ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಮದ್ಯ ಮತ್ತು ಉಚಿತ ಭರವಸೆಗಳು ತುಂಬಾ ಹೆಚ್ಚಳವಾಗಿದೆ. 2019ರಲ್ಲಿ 1,279.9 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದರೆ, 20204ರಲ್ಲಿ ಈವರೆಗೆ 2,068.8 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.