ಜ್ಯೋತಿರಾದಿತ್ಯ ಸಿಂಧಿಯಾ ಚಿಕ್ಕಮ್ಮ ನಾಲ್ಕು ಬಾರಿಯ ಶಾಸಕಿ, ಸಂಪುಟ ಸಚಿವೆ ಯಶೋಧರಾ ರಾಜೆ ಸಿಂಧಿಯಾ(69) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಬಿಜೆಪಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ.
Advertisement
ಮಧ್ಯಪ್ರದೇಶ ಚುನಾವಣೆಗೆ ಕೇಂದ್ರ ನಾಯಕರನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದೆ. ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಅನೇಕ ಹಾಲಿ ಸಚಿವರು ಮತ್ತು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಜ್ಯೋತಿರಾದಿತ್ಯ ಅವರನ್ನು ಕಣಕ್ಕಿಳಿಸುವ ಮೂಲಕ ಚೌಹಾಣ್ ಅವರ ಸ್ಥಾನಕ್ಕೆ ಯುವ ನಾಯಕನನ್ನು ಪಟ್ಟಾಷಿಭಿಕ್ತಗೊಳಿಸಲು, ಈ ಮೂಲಕ ಕೇಸರಿ ಪಡೆಯ ಜಯದ ಹಾದಿಯನ್ನು ಮುಂದುವರಿಸಲು ಚಿಂತನೆ ನಡೆದಿದೆ ಎಂಬ ಮಾತು ಪಕ್ಷದ ಪಡಸಾಲೆಯಲ್ಲಿ ಕೇಳಿಬಂದಿದೆ.