Advertisement
ಮಾಡುವುದೊಂದು, ಆಗುವುದೊಂದುಸಭೆಯಲ್ಲಿ ಆಗುವ ನಿರ್ಣಯಗಳು ಪುಸ್ತಕದಲ್ಲಿ ಬರೆಯುವಾಗ ಕತೆಯಂತೆ ಕಾಣುತ್ತಿದೆ. ಮನಬಂದಂತೆ ನಿರ್ಣಯ ಬರೆಯಲಾಗುತ್ತಿದೆ. ಕೆಲವೊಂದು ನಿರ್ಣಯಗಳನ್ನು ಮರು ತಿದ್ದುವುದು ಕಾಣುತ್ತಿದೆ. ಕಾಮಗಾರಿಗಳಿಗೆ ಬೇಕಾದ ಅಂದಾಜು ಪಟ್ಟಿಗಳನ್ನು ಒಟ್ಟಾರೆ ಬರೆಯಲಾಗುತ್ತಿದೆ. ಇನ್ನು ಮುಂದೆ ಸಭೆಯಲ್ಲಿ ಯಾವುದೆಲ್ಲಾ ನಿರ್ಣಯವಾಗುತ್ತದೋ ಅದನ್ನು ಇದ್ದ ಹಾಗೆಯೇ ಆ ಕ್ಷಣವೇ ಬರೆಯಬೇಕು ಎಂದು ಸದಸ್ಯ ಅಶ³ಕ್ ಅಹಮ್ಮದ್ ಸೂಚಿಸಿದರು. ಅಲ್ಲದೇ ಕೆಲವೊಂದು ನಿರ್ಣಯಗಳಿಗೆ ಅಧ್ಯಕ್ಷರು ಸಹಿಯೇ ಹಾಕಿಲ್ಲ ಎಂದು ಸದಸ್ಯ ಮೊಹಮ್ಮದ್ ಶರೀಫ್ ಪುಸ್ತಕವನ್ನು ಸಭೆಗೆ ತೋರಿಸಿದರು.ಬಳಿಕ ಸ್ಥಳದಲ್ಲಿಯೇ ಅಧ್ಯಕ್ಷರು ಸಹಿ ಮಾಡುವಂತೆ ಸೂಚಿಸಿದರು. ಆ ಬಳಿಕ ಅಧ್ಯಕ್ಷರು ಸಹಿ ಮಾಡಿದರು.
ಸದಸ್ಯ ನವೀನ್ ದೇವಾಡಿಗ ಮಾತನಾಡಿ,ಹಕ್ಕುಪತ್ರ ವಿತರಣೆಯಲ್ಲಿ ರಾಜಕೀಯ ನುಸುಳಿದೆ. ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ಫಲಾನುಭವಿಗಳಿಗೆ ಹಕ್ಕುಪತ್ರ ದೊರಕುವಂತೆ ಎಷ್ಟೋ ವರ್ಷಗಳ ಕಾಲ ಶ್ರಮ ವಹಿಸಿರುತ್ತಾರೆ, ಪುರಸಭಾ ವ್ಯಾಪ್ತಿಗೆ ಸಂಬಂಧಪಟ್ಟ 94ಸಿಸಿ ಹಕ್ಕುಪತ್ರಗಳನ್ನು ಪುರಸಭೆಯಲ್ಲಿ ಕೊಡದೇ ಗುಟ್ಟಾಗಿ ತಾ.ಪಂ.ನಲ್ಲಿ ಕೊಡಲಾಗಿದೆ ಇದರಲ್ಲಿ ತಾ.ಪಂ ಅಧ್ಯಕ್ಷೆ ಹಾಗೂ ಪುರಸಭಾ ಅಧ್ಯಕ್ಷರ ರಾಜಕೀಯ ಪ್ರೇರಿತ ಮನೋಭಾವ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಸದಸ್ಯರಿಗೆ ಕಳಂಕ
ಸದಸ್ಯ ಅಕ್ಷಯ್ ರಾವ್ ಮಾತನಾಡಿ, ಬೇರ್ಯಾವುದೇ ಸದಸ್ಯರ ಗಮನಕ್ಕೆ ಈ ವಿಚಾರ ತಿಳಿಸದೇ ಅಧ್ಯಕ್ಷರು ತಪ್ಪೆಸಗಿದ್ದಾರೆ.ಇದರಿಂದ ಎಲ್ಲ ಸದಸ್ಯರಿಗೂ ಕಳಂಕ ಬಂದಿದೆ ಎಂದರು.
Related Articles
ಸದಸ್ಯ ವಿನ್ನಿಬೋಲ್ ಮೆಂಡೋನ್ಸಾ ಮಾತನಾಡಿ, ಈ ಪ್ರಕರಣದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಜವಾಬ್ದಾರಿ ಮರೆತದ್ದು ಅವಾಂತರಕ್ಕೆ ಕಾರಣವಾಗಿದೆ ಎಂದರು.
Advertisement
ಗಮನಕ್ಕೆ ಬಂದಿರಲಿಲ್ಲಇದಕ್ಕುತ್ತರಿಸಿದ ಉಪಾಧ್ಯಕ್ಷ ಗಿರಿಧರ್ ನಾಯಕ್, 94ಸಿಸಿ ಹಕ್ಕುಪತ್ರ ವಿತರಣೆ ಕುರಿತು ನಮ್ಮ ಗಮನಕ್ಕೆ ಬಂದಿರಲಿಲ್ಲ.ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಹೋಗಿದ್ದೆವು ಎಂದು ಸಮರ್ಥಿಸಿಕೊಂಡರು. ಅಕ್ಷಮ್ಯ
ಸದಸ್ಯ ನವೀನ್ ದೇವಾಡಿಗ ಮಾತನಾಡಿ, ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಆ ಕಾರ್ಯಕ್ರಮ ನಡೆದಿದೆ. ತಾ.ಪಂ.ಅಧ್ಯಕ್ಷೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿರುವುದು ಅಕ್ಷಮ್ಯ ಇದಕ್ಕೆ ಅವರು ಉತ್ತರ ನೀಡಬೇಕು ಎಂದು ಸವಾಲೆಸದರು. ಅನುದಾನ ಪುರಸಭೆಗೇಕೆ?
ಸದಸ್ಯ ಶುಭದ್‌ರಾವ್ ಮಾತನಾಡಿ,ಸಿಗಡಿ ಕೆರೆಯನ್ನು ಶಾಸಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೊಳೆತ್ತಿದ್ದಾರೆ.ಸಾರ್ವಜನಿಕರಿಂದ ಸಂಗ್ರಹವಾದ ಹಣದಿಂದ ಎಲ್ಲಾ ಕಾರ್ಯವನ್ನು ಮಾಡಲಾಗಿದೆ.ಈಗ ಆವರಣಗೋಡೆಯನ್ನು ಪುರಸಭಾ ನಗರೋತ್ಥಾನ ನಿಧಿಯಿಂದ ಯಾಕೆ ನೀಡಬೇಕು? ಇದಕ್ಕೆ ಸದಸ್ಯರ ಸಹಮತ ಇಲ್ಲ. ಆವರಣ ಗೋಡೆಯನ್ನೂ ಕೂಡ ಸಾರ್ವಜನಿಕರ ಹಣದಿಂದಲೇ ಮಾಡಲಿ ಎಂದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಶಾಸಕರ ಮಾರ್ಗದರ್ಶನದಂತೆ ಆ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದರು. ಶಾಸಕರನ್ನೇ ಸಭೆಗೆ ಕರೆಯಿಸಿ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸುಭೀತ್ ಕುಮಾರ್, ಸಿಗಡಿಕೆರೆ ಹೊಳೆತ್ತುವ ಕಾರ್ಯದಲ್ಲಿ ಅವ್ಯವಹಾರವೇ ನಡೆದಿರಬಹುದು ಅದರ ಕುರಿತು ಮಾತನಾಡುತ್ತಿಲ್ಲ.