Advertisement
ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 1×8 ಎಂ.ವಿ.ಎ 66/11 ಕೆ.ವಿ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ ವೇಳೆಯಲ್ಲಿ ಈ ಭಾಗದ ಜನರ ವಿದ್ಯುತ್ ಸಮಸ್ಯೆಯನ್ನು ಕಂಡು ಹೆತ್ತೂರಿಗೆ ವಿದ್ಯುತ್ ಉಪಕೇಂದ್ರವನ್ನು ಮಂಜೂರು ಮಾಡಿಸಿದ್ದೆ. ಆದರೆ ನಾವು ಅಧಿಕಾರ ದಲ್ಲಿರದ ಕಾರಣ ಕಾಮಗಾರಿ ಮುಗಿಯುವುದು ವಿಳಂಬವಾಗಿದೆ. ದೇವೇೕಗೌಡರಿಗೆ ರಾಜಕೀಯ ವಾಗಿ ಪುನರ್ ಶಕ್ತಿ ನೀಡಿದ್ದು ಹೆತ್ತೂರು ಭಾಗದ ಜನ ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಋಣ ನಾನು ಎಂದಿಗೂ ಮರೆಯುವುದಿಲ್ಲ ಎಂದರು.
Related Articles
Advertisement
ಈ ಭಾಗದಲ್ಲಿ ಮಳೆ ಬಹಳ ಕಡಿಮೆ ಯಾಗಿರುವುದು ಆತಂಕವಾಗಿದೆ. ಕೊಡಗಿಗೆ ಹೇಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೀರೋ ಹಾಗೆಯೆ ಸಕಲೇಶಪುರ ಅಭಿವೃದ್ಧಿ ಪ್ರಾಧಿಕಾರ ಮಾಡಲು ಮುಖ್ಯಮಂತ್ರಿಗಳು ಗಮನಹರಿಸ ಬೇಕು. ಸಕಲೇಶಪುರ ತಾಲೂಕಿನಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕರು ಒತ್ತಾಯಿಸಿದರು.
ನೂತನ ಲೋಕ ಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಷ್ಟಾಚಾರ ಉಲ್ಲಂಘನೆ: ಜಿಪಂ ಸದಸ್ಯೆ ಉಜ್ಮಾ ರುಜ್ವಿ ಮಾತನಾಡಿ, ಈ ಭಾಗದ ಜನರ ಅನು ಕೂಲಕ್ಕಾಗಿ ತಮ್ಮ ಪತಿ ಸುದರ್ಶನ್ ಅವರು 2.20 ಎಕರೆ ಜಾಗವನ್ನು ಕೆಪಿಟಿಸಿಎಲ್ಗೆ ನೀಡಿದ್ದರು. ಆದರೆ ಇಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಯಾದ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿ ಗಳು ಹಾಕದೆ ಅಪಮಾನವೆಸಗಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣ ನವರು ನನ್ನ ಮನವೊಲಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲದಿದ್ದಲ್ಲಿ ನಾನು ಇಲ್ಲಿಗೆ ಬರುತ್ತಿರಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮುಖ್ಯ ಅಭಿಯಂತರ ಕೊಟ್ರೇಶ್, ಮುಖ್ಯ ಅಧೀಕ್ಷಕ ಉಮೇಶ್, ಕಾರ್ಯಪಾಲಕ ಅಭಿಯಂತರ ಲೋಕೇಶ್, ಉಪ ಅಭಿಯಂತರ ರಂಜನ್, ಜಾತ್ಯತೀತ ಜನತಾದಳ ಮುಖಂಡರಾದ ಸಚಿನ್ ಪ್ರಸಾದ್, ನಾಗರಾಜ್, ದಿವಾಕರ್, ರಾಜೇಗೌಡ ಮುಂತಾದವರು ಹಾಜರಿದ್ದರು.