Advertisement

ಮಲೆ: ರಾಜಕೀಯ ಸಮರ

08:20 AM Oct 05, 2018 | Karthik A |

ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಕೇರಳದಲ್ಲಿ ಭುಗಿಲೆದ್ದಿರುವ ರಾಜಕೀಯ ಮೇಲಾಟ ಮತ್ತಷ್ಟು ತೀವ್ರವಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸು ವುದಿಲ್ಲ ಎಂದ ಎಲ್‌ಡಿಫ್ ಸರ್ಕಾರದ ವಿರುದ್ಧ ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಮುಗಿಬಿದ್ದಿವೆ. ನಾವು ಜನರ ಧಾರ್ಮಿಕ ನಂಬಿಕೆ ಪರವಾಗಿದ್ದು, ಅವರ ಧಾರ್ಮಿಕ ಹಕ್ಕನ್ನು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್‌ ಹೇಳಿದರೆ, ಸರ್ಕಾರ ಅಯ್ಯಪ್ಪ ಸ್ವಾಮಿ ಭಕ್ತರ ನಂಬಿಕೆಗಳಿಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ಹೇಳಿದೆ. ಇನ್ನೊಂದೆಡೆ, ಇಲ್ಲಿನ ನಾಯರ್‌ ಸರ್ವಿಸ್‌ ಸೊಸೈಟಿ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next