Advertisement

ಕೆಂಪೇಗೌಡರ ಪ್ರತಿಮೆ ಅನಾವರಣದಲ್ಲಿ ರಾಜಕಾರಣ: ಎಚ್‌.ಡಿ.ಕುಮಾರಸ್ವಾಮಿ

07:58 PM Nov 12, 2022 | Team Udayavani |

ರಾಮನಗರ: ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಕಾರ್ಯಕ್ರಮವನ್ನೂ ರಾಜಕಾರಣಕ್ಕೋಸ್ಕರ ಮಾಡಿದ್ದೀರಿ, ಇದರಿಂದ ನನಗೇನೂ ಆತಂಕವಿಲ್ಲ. ಎಲ್ಲವನ್ನೂ ರಾಜ್ಯದ ಜನತೆ ತೀರ್ಮಾನ ಮಾಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ತಾಲೂಕಿನ ಬಿಡದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಕಲಚೇತನರಿಗೆ ಸೈಕಲ್‌ ವಿತರಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಲೂಟಿ ಮಾಡಿಕೊಂಡು ಕೂತಿದ್ದೀರಿ. ಕರ್ನಾಟಕ ಮತ್ತು ಕನ್ನಡದ ಸ್ಥಿತಿ ಹೇಗಿದೆ ಹಾಗೂ ಬಿಜೆಪಿ ನಾಯಕರ ಸ್ಥಿತಿ ನರೇಂದ್ರ ಮೋದಿಯವರ ಬಳಿ ಹೇಗಿದೆ ಎಂಬುದರ ಪ್ರದರ್ಶನವಾಗುತ್ತಿದೆ. ಮುಖ ಹೊತ್ತು ಮತ ಕೇಳುವ ಆತ್ಮಸ್ಥೈರ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಜನ ಕೆಂಪೇಗೌಡರ ಪ್ರತಿಮೆ ಮಾಡಿದ್ದಾರೆ, ಆದರೆ ನೀವು ಸರ್ಕಾರದ ಹಣ ಖರ್ಚು ಮಾಡಿ ಪ್ರತಿಮೆ ಮಾಡಿದ್ದೀರಿ, ಹಾಗಾಗಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸೋದು ನಿಮ್ಮ ಧರ್ಮವಾಗಿದೆ, ಅದೇನು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ಲ, ನಿಮ್ಮ ಪಕ್ಷದಿಂದ ಮಾಡಿದ್ದೇ ಆಗಿದ್ದಿದ್ರೆ ನಮ್ಮದೇನೂ ತಕರಾರಿಲ್ಲ, ಆದರೆ ಸರ್ಕಾರ ನೀತಿ, ನಿಯಮಗಳನ್ನು ಮೀರಬಾರದು ಎಂದು ಸರ್ಕಾರದ ವಿರುದ್ಧ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next