ಬೆಂಗಳೂರು: ರಾಜಕೀಯ ಪ್ರೇರಿತ ಮೀಸಲಾತಿಗಳು ಹಾಗೂ ಎಲ್ಲರಿಗೂ ಮೀಸಲಾತಿಬೇಕು ಎನ್ನುವುದು ಯಾವುದೇ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತ ಮೀಸಲಾತಿ ಹೋರಾಟಗಳಿಂದ ಸಮಾಜಕ್ಕೆ ಹಾಗೂ ಆಡಳಿತಕ್ಕೆ ತೊಂದರೆ ಉಂಟು ಮಾಡುವ ಕೆಲಸ ಮಾತ್ರ ಆಗುತ್ತಿದೆ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ:ಶ್ರೀರಾಮಮಂದಿರ ನಿರ್ಮಾಣ ಭಾವನಾತ್ಮಕ ವಿಚಾರ: ಕೇಂದ್ರ ಸಚಿವ ಸದಾನಂದ ಗೌಡ
ಈಗಾಗಲೇ ಆರ್ಥಿಕವಾಗಿ ಹಿಂದಿಳುದಿರುವವರಿಗೆ ಶೇ.10 ಪ್ರತಿಶತ ಮೀಸಲಾತಿ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆ, ಅವರಿಗೆ ಮೀಸಲಾತಿ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಬದಲಾವಣೆಗೆ ವಿರೋಧ ಪಕ್ಷದ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕರ್ನಾಟದಲ್ಲಿ ವಿರೋಧ ಪಕ್ಷ ಇದೆಯೇ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್‌ನಲ್ಲೇ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಇದೆ. ಅರ್ಹತೆ ಇರುವವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ನೀಡಬೇಕು ಎನ್ನುವುದು ಸರಿ ಇದೆ. ಆದರೆ, ಇದರ ಮಾನಂದಡಗಳ ಬಗ್ಗೆ ಮತ್ತಷ್ಟು ವಿಸ್ತೃತವಾದ ಚರ್ಚೆ ಆಗಬೇಕಿದೆ ಎಂದು ಡಿವಿಎಸ್ ಹೇಳಿದರು.
ಇದನ್ನೂ ಓದಿ: ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ: ಸುರೇಶ್ ಕುಮಾರ್