Advertisement
ನಗರಸಭೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ 500 ಮತಗಳಿಲ್ಲ ಎಂದು ಮಾಜಿ ಸಿಎಂ ಸಹಿತ ವಿರೋಧ ಪಕ್ಷಗಳ ಮುಖಂಡರು ಗೇಲಿ ಮಾಡಿದ್ದಾರೆ. 14ನೇ ತಾರೀಖು 500 ಮತದಾರರು ಇದ್ದಾರೆಯೇ ಅಥವಾ ಗೆಲ್ಲಿಸುತ್ತಾರಾ ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
Related Articles
Advertisement
ಮೇಲ್ಮನೆಗೆ ಬಹಳ ಪ್ರಾಶಸ್ತ್ಯ: ವಿಧಾನ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಧ್ವನಿಯಾಗಿ ಕೆಲಸ ಮಾಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡುವ ಚುನಾವಣೆ ಮೇಲ್ಮನೆಗೆ ಬಹಳ ಪ್ರಾಶಸ್ತ್ಯಯಿದೆ. ಯಾವುದೇ ಬಿಲ್‌ಪಾಸ್ ಆಗಬೇಕಾದರೆ, ಸಂವಿಧಾನದ ಆಶಯದಂತೆ ಯಾವುದೇ ಬಿಲ್ ಕೆಳಮನೆಯಲ್ಲಿ ಪಾಸ್ ಆದರೆ, ಬಲಿಕ ಮೇಲ್ಮನೆಯಲ್ಲಿ ಕೂಡ ಅನುಮೋದನೆ ಸಿಗಬೇಕಾಗಲಿದೆ. ಆಗಾದ್ರೆ ಮಾತ್ರ ಬಿಲ್ ಪಾಸ್ ಆಗಲಿದೆ.
ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ: ಕೆಳಮನೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಆದರೆ, ಮೇಲ್ಮನೆಯಲ್ಲಿ ಬಹುಮತ ಬೇಕಾಗಲಿದೆ. ಇಲ್ಲೂ ಸ್ಪಷ್ಟ ಬಹುಮತಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಒಳ್ಳೆಯ ಆಡಳಿತ ನೀಡಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂಬ ಕಾರಣ ಮನವಿ ಮಾಡಿದ್ದೆ. ಮನವಿಗೆ ಸ್ಪಂದಿಸಿರುವ ವಿಶ್ವಾಸ ಇದೆ ಎಂದು ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಮತಕ್ಕಾಗಿ ಆಣೆ ಪ್ರಮಾಣಗಳನ್ನು ಮಾಡಿಸಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಈಗಾಗಲೇ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮತದಾನ ಮಾಡುವುದು ಯಾರಿಗೆ ಗೊತ್ತಾಗಬಾರದೆಂದು ಅಧಿ ಕಾರಿಗಳು ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದಾರೆ.
ಅದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಒಬ್ಬ ಶಾಸಕನಾಗಿ ಮತ ಚಲಾವಣೆ ಮಾಡಬೇಕಾಗಿತ್ತು ಅದನ್ನು ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದ್‌ರೆಡ್ಡಿ, ಮುಖಂಡರಾದ ಎಸ್. ಎಂ.ರಫೀಖ್, ಕೆ.ವಿ.ನವೀನ್ ಕಿರಣ್, ಮಹಾಕಾಳಿ ಬಾಬು, ನಗರಸಭಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.