Advertisement

ಸರ್ಕಾರಿ ವೆಚ್ಚದಲ್ಲಿ ಬಿಜೆಪಿ ಕಾರ್ಯಕಾರಿಣಿ

01:44 PM Sep 22, 2021 | Team Udayavani |

ದಾವಣಗೆರೆ: ದಾವಣಗೆರೆಯಲ್ಲಿ ಸೆ. 18ಮತ್ತು 19 ರಂದು ಸರ್ಕಾರಿ ವೆಚ್ಚದಲ್ಲಿಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಸಲಾಗಿದೆಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರು ದೂರಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಮಹಾನಗರ ಪಾಲಿಕೆವಿಪಕ್ಷ ನಾಯಕ ಎ. ನಾಗರಾಜ್‌,ಬಿಜೆಪಿ ಪಕ್ಷದ ಕಾರ್ಯಕಾರಿಣಿಗೆ ಸರ್ಕಾರದ ಕಾರು, ವಾಹನ,ಅಧಿಕಾರಿಗಳು, ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.

ಸರ್ಕಾರಿ ವೆಚ್ಚದಲ್ಲಿನಡೆಸಿರುವ ಕಾರ್ಯಕಾರಣಿಯಲ್ಲಿ ಪಕ್ಷದಸಂಘಟನೆ, ಬಲವರ್ಧನೆಗೆ ಗಮನನೀಡಲಾಗಿದೆಯೇ ಹೊರತು ಜನರಿಗೆಉಪಯೋಗವಾಗುವಂತಹ ಕಾರ್ಯಕ್ರಮ,ಯೋಜನೆ, ರಾಜ್ಯದ ಅಭಿವೃದ್ಧಿ ಬಗ್ಗೆಯಾವುದೇ ನಿರ್ಣಯ ಕೈಗೊಂಡಿಲ್ಲಎಂದು ಟೀಕಿಸಿದರು.

ಮುಖ್ಯಮಂತ್ರಿಗಳಾದಿಯಾಗಿಸಚಿವರ ದಂಡೇ ಆಗಮಿಸಿದ ಕಾರಣಕ್ಕೆಸ್ಮಾರ್ಟ್‌ಸಿಟಿ ಹಣದಲ್ಲಿ ಅತ್ಯಂತತರಾತುರಿಯಲ್ಲಿ ರಸ್ತೆಗಳ ಗುಂಡಿಮುಚ್ಚುವ, ನಾಮಕಾವಸ್ತೆ ರಸ್ತೆ ದುರಸ್ತಿಮಾಡಲಾಗಿದೆ. ಶಾಶ್ವತವಾದ ಕಾಮಗಾರಿಕೈಗೊಂಡಿದ್ದರೆ ದಾವಣಗೆರೆ ನಗರದಜನರಿಗೆ ಅನುಕೂಲವಾದರೂ ಆಗುತ್ತಿತ್ತು ಎಂದರು.

ಸಾಕಷ್ಟು ಹಣ ಖರ್ಚು ಮಾಡಿ ನಡೆಸಿದಕಾರ್ಯಕಾರಿಣಿಯಲ್ಲಿ ಜನಸಾಮಾನ್ಯರುಅನುಭವಿಸುತ್ತಿರುವ ಬೆಲೆ ಏರಿಕೆ,ಕೊರೊನಾದಿಂದ ಮೃತಪಟ್ಟಿರುವಕುಟುಂಬಗಳಿಗೆ ಪರಿಹಾರ, ಮೂರನೇಅಲೆ ತಡೆಯಲು ಅಗತ್ಯ ಕ್ರಮಗಳನಿರ್ಣಯ ಕೈಗೊಳ್ಳಲಿಲ್ಲ.

Advertisement

ಮುಂದಿನ ಚುನಾವಣೆಗೆ ಸಿದ್ಧತೆ, ಪ್ರಧಾನಿಯವರನ್ನುಅಭಿನಂದಿಸುವ ನಿರ್ಣಯ ಕೈಗೊಳ್ಳುವಮೂಲಕ ಜನವಿರೋಧಿ ನೀತಿಅನುಸರಿಸಲಾಗಿದೆ ಎಂದು ದೂರಿದರು.ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರತಿ ಲೀಟರ್‌ಗೆ 70 ರೂಪಾಯಿ ಇದ್ದ ಪೆಟ್ರೋಲ್‌ಬೆಲೆ 106, ಗ್ಯಾಸ್‌ ಸಿಲಿಂಡರ್‌ಧಾರಣೆ 410 ರೂಪಾಯಿಯಿಂದ887 ರೂಪಾಯಿ, ಅಡುಗೆ ಎಣ್ಣೆ, ದಿನಸಿ ಎಲ್ಲವೂ ತುಟ್ಟಿಯಾಗಿರುವ ಬಗ್ಗೆ ಕಾರ್ಯಕಾರಿಣಿಯಲ್ಲಿ ತುಟಿಯನ್ನೇ ಬಿಚ್ಚಲಿಲ್ಲ.

ವಾಮ ಮಾರ್ಗದಿಂದಅಧಿಕಾರ ಹಿಡಿದಿರುವ ಬಿಜೆಪಿಗೆ ಜನರುಮುಂದಿನ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿದ್ದಾರೆ ಎಂದರು.ಕಾರ್ಯಕಾರಿಣಿ ನಡೆಯುವ ಒಂದುವಾರದ ಮುನ್ನವೇ ದಾವಣಗೆರೆಯಲ್ಲಿನಬೀದಿಬದಿ ವ್ಯಾಪಾರಿಗಳನ್ನು ಖಾಲಿಮಾಡಿಸಲಾಗಿತ್ತು. ಅಂದೇ ದುಡಿದುಜೀವನ ನಡೆಸುವಂತಹ ಸಾವಿರಾರುಜನರ ಹೊಟ್ಟೆ ಮೇಲೆ ಹೊಡೆಯಲಾಗಿದೆ.

ಸಚಿವರು, ಶಾಸಕರು, ಗಣ್ಯರುಉಳಿದುಕೊಂಡಿದ್ದ ಹೋಟೆಲ್‌, ಲಾಡ್‌jಗಳ ಸುತ್ತ ಸ್ವತ್ಛತಾ ಕಾರ್ಯಕ್ಕೆ ವಾರಕ್ಕೂ ಹೆಚ್ಚುಕಾಲ ಪೌರ ಕಾರ್ಮಿಕರನ್ನು ಬಳಸಿಕೊಂಡಪರಿಣಾಮ ಎಲ್ಲ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಸ್ವತ್ಛ ಮಾಡುವರೇ ಇಲ್ಲದಂತಾಗಿತ್ತು ಎಂದು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next