Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಮಹಾನಗರ ಪಾಲಿಕೆವಿಪಕ್ಷ ನಾಯಕ ಎ. ನಾಗರಾಜ್,ಬಿಜೆಪಿ ಪಕ್ಷದ ಕಾರ್ಯಕಾರಿಣಿಗೆ ಸರ್ಕಾರದ ಕಾರು, ವಾಹನ,ಅಧಿಕಾರಿಗಳು, ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.
Related Articles
Advertisement
ಮುಂದಿನ ಚುನಾವಣೆಗೆ ಸಿದ್ಧತೆ, ಪ್ರಧಾನಿಯವರನ್ನುಅಭಿನಂದಿಸುವ ನಿರ್ಣಯ ಕೈಗೊಳ್ಳುವಮೂಲಕ ಜನವಿರೋಧಿ ನೀತಿಅನುಸರಿಸಲಾಗಿದೆ ಎಂದು ದೂರಿದರು.ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಲೀಟರ್‌ಗೆ 70 ರೂಪಾಯಿ ಇದ್ದ ಪೆಟ್ರೋಲ್‌ಬೆಲೆ 106, ಗ್ಯಾಸ್ ಸಿಲಿಂಡರ್‌ಧಾರಣೆ 410 ರೂಪಾಯಿಯಿಂದ887 ರೂಪಾಯಿ, ಅಡುಗೆ ಎಣ್ಣೆ, ದಿನಸಿ ಎಲ್ಲವೂ ತುಟ್ಟಿಯಾಗಿರುವ ಬಗ್ಗೆ ಕಾರ್ಯಕಾರಿಣಿಯಲ್ಲಿ ತುಟಿಯನ್ನೇ ಬಿಚ್ಚಲಿಲ್ಲ.
ವಾಮ ಮಾರ್ಗದಿಂದಅಧಿಕಾರ ಹಿಡಿದಿರುವ ಬಿಜೆಪಿಗೆ ಜನರುಮುಂದಿನ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿದ್ದಾರೆ ಎಂದರು.ಕಾರ್ಯಕಾರಿಣಿ ನಡೆಯುವ ಒಂದುವಾರದ ಮುನ್ನವೇ ದಾವಣಗೆರೆಯಲ್ಲಿನಬೀದಿಬದಿ ವ್ಯಾಪಾರಿಗಳನ್ನು ಖಾಲಿಮಾಡಿಸಲಾಗಿತ್ತು. ಅಂದೇ ದುಡಿದುಜೀವನ ನಡೆಸುವಂತಹ ಸಾವಿರಾರುಜನರ ಹೊಟ್ಟೆ ಮೇಲೆ ಹೊಡೆಯಲಾಗಿದೆ.
ಸಚಿವರು, ಶಾಸಕರು, ಗಣ್ಯರುಉಳಿದುಕೊಂಡಿದ್ದ ಹೋಟೆಲ್, ಲಾಡ್jಗಳ ಸುತ್ತ ಸ್ವತ್ಛತಾ ಕಾರ್ಯಕ್ಕೆ ವಾರಕ್ಕೂ ಹೆಚ್ಚುಕಾಲ ಪೌರ ಕಾರ್ಮಿಕರನ್ನು ಬಳಸಿಕೊಂಡಪರಿಣಾಮ ಎಲ್ಲ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಸ್ವತ್ಛ ಮಾಡುವರೇ ಇಲ್ಲದಂತಾಗಿತ್ತು ಎಂದು ಆರೋಪಿಸಿದರು.