Advertisement

ಇನ್ನು ಸರಕಾರವೇ ರೈತರ‌ ಮನೆ ಬಾಗಿಲಿಗೆ ಬರಲಿದೆ: ಬಿ.ಸಿ.ಪಾಟೀಲ್

04:54 PM Sep 06, 2021 | Team Udayavani |

ಶಿರಸಿ: ರೈತರು ಬೆಂಗಳೂರಿಗೆ ಸರಕಾರದ ಕಾರ್ಯಕ್ಕೆ ಬರಬೇಕಿಲ್ಲ. ಇನ್ನು ಸರಕಾರವೇ ರೈತರ‌ ಮನೆ ಬಾಗಿಲಿಗೆ ಬರಲಿದೆ. ರೈತರ‌ ಕಷ್ಟವನ್ನು‌ ಅರಿತು ಕಷ್ಟದಲ್ಲಿ‌ ಇರುವವರ ಜೊತೆಯಾಗಿ‌ ನಿಲ್ಲಲಿದ್ದೇವೆ ಎಂದು ಕೃಷಿ ಸಚಿವ‌‌ ಬಿ.ಸಿ.ಪಾಟೀಲ ಹೇಳಿದರು.

Advertisement

ಸೋಮವಾರ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸದಲ್ಲಿ ಮೈಕ್ರೋ ಎಟಿಎಂ ಉದ್ಘಾಟಿಸಿ‌ ಮಾತನಾಡಿದರು.

ಕೃಷಿತೋ ನಾಸ್ತಿದುರ್ಭಿಕ್ಷಂ. ಕೃಷಿ ನಂಬಿದರೆ ದುರ್ಭಿಕ್ಷ ಬಾರದು. ಅಂತಹ ಕೃಷಿಗೆ ಒತ್ತು ಕೊಡುವ ಬ್ಯಾಂಕ್ ಇದಾಗಿದೆ ಎಂದು ಬಣ್ಣಿಸಿದರು.

ಶಿರಸಿ ಎಂದರೆ ಬಾಲ್ಯ ನೆನಪಾಗುತ್ತದೆ.‌ ಎತ್ತಿನ ಗಾಡಿಯ‌ ಮೂಲಕ ಅಡಿಕೆ ಹಾಕಿಕೊಂಡು ಬಂದಿದ್ದೆವು. ಅಂದು‌ ಎರಡು ದಿ‌ನ ಉಳಿದಿದ್ದೆ. ಅಂದು ರೈತನ‌ ಮಗನಾಗಿದ್ದವನು‌‌ ಇಂದು‌ ಕೃಷಿ ಸಚಿವನಾಗಿದ್ದೇನೆ ಎಂದರು.

ಇದನ್ನೂ ಓದಿ:ಡಯಾಲಿಸಿಸ್‌ ವಿಭಾಗಕ್ಕೆ ಬೇಕಿದೆ ಕಾಯಕಲ್ಪ

Advertisement

ಕೃಷಿ ಸಾಲ 800 ಕೋ.ರೂ. ನೀಡಿದೆ. ಬೇರೆ ಬ್ಯಾಂಕಿನ ಸಾಲ‌ ಪಡೆಯದೇ ಸ್ವತಃ‌ ಕೆಲಸ‌ ಮಾಡುತ್ತಿದೆ‌ ಎಂದರು.

ಕೃಷಿ ಬೆಳೆದಿಲ್ಲ. ಕೃಷಿಕ ಬೆಳೆದಿಲ್ಲ.‌ ಮಾರುಕಟ್ಟೆ ಯಲ್ಲಿ ಆದ್ಯತೆ ಬೇಕಿದೆ. ಪ್ರಧಾನ ಮಂತ್ರಿಗಳ ಆತ್ಮ‌ನಿರ್ಭರ ಭಾರತದಲ್ಲಿ ಆಹಾರ ಸಂಸ್ಕರಣದಲ್ಲಿ 10 ಲಕ್ಷ ಕೋಟಿ ರೂ. ಇಟ್ಟಿದ್ದಾರೆ ಎಂದೂ ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿಸಿ.ಪಾಟೀಲ ಯಲ್ಲಾಪುರದ ಕೈಗಡಿಗೆ ಬಂದು ರೈತರ ಜೊತೆ ಚರ್ಚೆ ನಡೆಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next