Advertisement

ಕೆಂಪಣ್ಣ ವಿರುದ್ಧ ರಾಜಕೀಯ ತಿರುಗೇಟು: ಸಂಪುಟ ಸಭೆಯಲ್ಲಿ ಭಾರಿ ಚರ್ಚೆ

03:25 PM Aug 25, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಕೆಂಪಣ್ಣ ಹಾಗೂ ಕಾಂಗ್ರೆಸ್ ಮಾಡುತ್ತಿರುವ 40 % ಕಮಿಷನ್ ವಿರುದ್ಧ ರಾಜಕೀಯವಾಗಿಯೇ ತಿರುಗೇಟು ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಸಂಪುಟ ಸಭೆಯಲ್ಲಿ ಭಾರಿ ಚರ್ಚೆ ನಡೆದಿದೆ.

Advertisement

ಕೆಂಪಣ್ಣ ಯಾರ್ರೀ ? ಎಲ್ಲಿ ಕಾಂಟ್ರಾಕ್ಟ್ ಮಾಡಿದ್ದಾರೆ ? ಎಂಬ ಬಗ್ಗೆ ಮಾಹಿತಿಯೇ ಇಲ್ಲ ? ಕೆಂಪಣ್ಣ ಗುತ್ತಿಗೆದಾರನೇ ಅಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ 224 ಶಾಸಕರೂ ಭ್ರಷ್ಟರು ಎಂದು ಅವರು ಆರೋಪಿಸಿದ್ದಾರೆ. ಅದನ್ನು ಒಪ್ಪಲು ಸಾಧ್ಯವೇ ? ಗೊತ್ತು ಗುರಿ ಇಲ್ಲದೇ ಈ ರೀತಿ ಆರೋಪ ಮಾಡುತ್ತಾ ಹೋದರೆ ಉತ್ತರಿಸಲು ಸಾಧ್ಯವೇ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ ಅವರು ಕೆಲವೊಮ್ಮೆ ಹೇಳಿಕೆ ನೀಡಿಬಿಡುತ್ತಾರೆ. ಅದಕ್ಕೆ ಉತ್ತರಿಸುವುದಕ್ಕೆ ಸಾಧ್ಯವಿಲ್ಲ. ಆತ ಆಪಾದನೆ ಮಾಡಿದ ಕಾರಣಕ್ಕೆ ನ್ಯಾಯಾಂಗ ತನಿಖೆ ನಡೆಸುವುದಕ್ಕೆ ಸಾಧ್ಯವೇ ? ಮಾಹಿತಿ ಇದ್ದರೆ ಮೊದಲು ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next